ಟಿಬೆಟ್ ಸೈನಿಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ಯಾಕೆ ಬಿಜೆಪಿ ನಾಯಕ, ಭಾರತೀಯ ಸೇನೆ..?

masthmagaa.com:

ದೆಹಲಿ: ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರೋ ಚೀನಾಗೆ ಭಾರತ ಹೊಸ ಸಂದೇಶ ನೀಡಿದೆ. ಲೇಹ್​​ನಲ್ಲಿ ಇತ್ತೀಚೆಗೆ ನೆಲಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ ಟಿಬೆಟಿಯನ್ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ  ಭಾರತೀಯ ಸೇನೆ ಮತ್ತು ಬಿಜೆಪಿ ನಾಯಕ ರಾಮ್ ಮಾಧವ್ ಅಂತಿಮ ನಮನ ಸಲ್ಲಿಸಿದ್ದಾರೆ. ಮೃತ ಯೋಧ ನೈಮಾ ಟೆನ್ಜಿನ್ ಎಸ್​​ಎಫ್​ಎಫ್​​​ ಸ್ಪೆಷಲ್ ಫ್ರಂಟಿಯರ್ ಫೋರ್ಸ್​​​ನಲ್ಲಿ ಕಾರ್ಯನಿರ್ವಹಿಸ್ತಿದ್ರು.

ಈ ಯೋಧರು ದಲೈಲಾಮಾ, ಟಿಬೆಟ್ ಮತ್ತು ಭಾರತದ ಬಾವುಟಕ್ಕೆ ನಿಷ್ಠರಾಗಿರುತ್ತಾರೆ. ಜೊತೆಗೆ ಭಾರತೀಯ ಸೇನೆಯ ಕಮಾಂಡ್​​​​​​​​ನಂತೆ ಕಾರ್ಯ ನಿರ್ವಹಿಸುತ್ತಾರೆ. ಇವರು ಬೆಟ್ಟ-ಗುಡ್ಡಗಳಲ್ಲಿ ಯುದ್ಧ ಮಾಡಲು ಸಮರ್ಥರಾಗಿದ್ದು, ಟಿಬೆಟ್​​ನಲ್ಲಿ ಶತ್ರುಗಳ ನಡುವೆಯೇ ಇದ್ದುಕೊಂಡು ಕಾರ್ಯನಿರ್ವಹಿಸ್ತಾರೆ.

1,959ರಲ್ಲಿ ಟಿಬೆಟಿಯನ್ ದಂಗೆ ವಿಫಲವಾದ ಬಳಿಕ ದಲೈಲಾಮಾ ಭಾರತಕ್ಕೆ ಬಂದು ಆಶ್ರಯ ಪಡೆದಾಗ ಅವರ ಜೊತೆ ಅಪಾರ ಸಂಖ್ಯೆಯ ಟಿಬೆಟಿಯನ್ ಜನರೂ ಕೂಡ ಭಾರತಕ್ಕೆ ಬಂದಿದ್ದರು. 1962ರಲ್ಲಿ ಚೀನಾ ವಿರುದ್ಧದ ಯುದ್ಧದ ಬಳಿಕ ಭಾರತ ಟಿಬೆಟ್ ವಲಸಿಗರನ್ನು ಸೇರಿಸಿ, ಈ ಪಡೆಯನ್ನು ಕಟ್ಟಿತ್ತು. ಇದರಲ್ಲಿ ಸುಮಾರು 3500 ಮಂದಿ ಸೈನಿಕರಿದ್ಧಾರೆ.

-masthmagaa.com

Contact Us for Advertisement

Leave a Reply