ಹುಲಿಗೂ ವಕ್ಕರಿಸಿದ ಮಹಾಮಾರಿ ಕೊರೋನಾ..!

masthmagaa.com:

ನ್ಯೂಯಾರ್ಕ್​​: ಇಷ್ಟು ದಿನ ವಿಶ್ವದ ಮಾನವರನ್ನು ಕಾಡುತ್ತಿದ್ದ ಕೊರೋನಾ ಈಗ ಪ್ರಾಣಿಗಳಿಗೂ ವಕ್ಕರಿಸಿದೆ. ಅಮೆರಿಕದ ನ್ಯೂಯಾರ್ಕ್​​ನ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೋನಾ ವೈರಸ್ ತಗುಲಿದೆ. ಮನುಷ್ಯರಿಂದ ಪ್ರಾಣಿಗೆ ಈ ಕಾಯಿಲೆ ಹರಡಿರುವ ಮೊದಲ ಪ್ರಕರಣ ಇದಾಗಿದೆ. ಕೊರೋನಾಗೆ ಒಳಗಾದ ಈ ಹುಲಿ 4 ವರ್ಷದ ನದಿಯಾ ಎಂಬ ಮಲಯನ್ ಟೈಗರ್ ಎಂದು ತಿಳಿದುಬಂದಿದೆ.

ಒಣಕೆಮ್ಮು ಶುರುವಾಗಿದ್ದರಿಂದ ಈ ಹುಲಿ ಮತ್ತು ಇದರ ಜೊತೆಗಿದ್ದ ಮೂರು ಹುಲಿಗಳು ಮತ್ತು ಸಿಂಹಗಳಿಗೂ ಟೆಸ್ಟ್​ ಮಾಡಲಾಗಿತ್ತು. ಇದೀಗ ನದಿಯಾ ಎಂಬ ಹುಲಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಮೃಗಾಲಯದ ನೌಕರನೊಬ್ಬನಿಗೆ ಕೊರೋನಾ ವೈರಸ್ ಬಂದಿತ್ತು. ಈತನ ಮೂಲಕವೇ ಹುಲಿಗೂ ಕೊರೋನಾ ವೈರಸ್ ಬಂದಿದೆ ಅನ್ನೋದು ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply