ಪ್ರಿಯತಮೆಗಾಗಿ 2000 ಕಿ.ಮೀ. ನಡೆದ ಹುಲಿ..! ಪ್ರೀತಿ ಅಂದ್ರೆ ಇದು…

masthmagaa.com:

ಮಹಾರಾಷ್ಟ್ರ: ಮನುಷ್ಯರು ಪ್ರೀತಿ, ಹಸಿವು, ಉದ್ಯೋಗಕ್ಕಾಗಿ ಎಷ್ಟು ದೂರ ಬೇಕಾದ್ರು ಹೋಗ್ತಾರೆ. ಅದೇ ರೀತಿ ಪ್ರಾಣಿಗಳೂ ಅಷ್ಟೆ. ಅವುಗಳಲ್ಲೂ ಮನಸ್ಸು, ಪ್ರೀತಿ ಅನ್ನೋದು ಇರುತ್ತೆ. ಅದಕ್ಕೆ ಸಾಕ್ಷಿ ಈ ಹುಲಿ.. ಹುಲಿಯೊಂದು ತನ್ನ ಜೋಡಿಯನ್ನು ಹುಡುಕಿಕೊಂಡು 2 ಸಾವಿರ ಕಿಲೋಮೀಟರ್ ದೂರದವರೆಗೆ ಸಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹುಲಿಯ ಕಥೆ ಈಗ ತುಂಬಾ ವೈರಲ್ ಆಗಿದೆ.

प्यार की तलाश में 2000 KM चला बाघ, तेलंगाना से महाराष्ट्र पहुंचा

ಈ ಹುಲಿ ತೆಲಂಗಾಣದ ಆದಿಲಾಬಾದ್ ಬಳಿ ಇರುವ ಟಿಪೇಶ್ವರ ಅಭಯಾರಣ್ಯದಿಂದ ಮಹಾರಾಷ್ಟ್ರದ ಬುಲ್ಡಾಣಾದಲ್ಲಿರುವ ಜ್ಞಾನ ಗಂಗಾ ಅರಣ್ಯಕ್ಕೆ ಬಂದಿದೆ. ಈ ಹುಲಿಯ ಪ್ರೇಮಕಥೆಯನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಹುಲಿ ತನ್ನ ಜೋಡಿಗಾಗಿ ಕಾಲುವೆಗಳು, ಗದ್ದೆ, ಅರಣ್ಯ, ರಸ್ತೆಗಳನ್ನು ದಾಟಿಕೊಂಡು, ಹಗಲು ವಿಶ್ರಮಿಸಿ, ರಾತ್ರಿ ವೇಳೆ ನಡೆದುಕೊಂಡು ಸುಮಾರು 2 ಸಾವಿರ ಕಿಲೋಮೀಟರ್​​ವರೆಗೆ ಬಂದಿದೆ ಅಂತ ಬರೆದುಕೊಂಡಿದ್ದಾರೆ.

ಈ ಹುಲಿಯ ಕುತ್ತಿಗೆಯಲ್ಲಿ ರೇಡಿಯೋ ಕಾಲರ್ ಹಾಕಲಾಗಿದ್ದು, ಇದರ ಸಹಾಯದಿಂದ ಈ ಹುಲಿಯ ಪ್ರಯಾಣದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ಹುಲಿಯ ಪ್ರೇಮಕಥೆ ನೆಟ್ಟಿಗರ ಮನಗೆದ್ದಿದ್ದು, ಎಲ್ಲರೂ ಹುಲಿಯ ಪ್ರೀತಿಗೆ ತಲೆದೂಗಿದ್ದಾರೆ.

masthmagaa.com:

Contact Us for Advertisement

Leave a Reply