ತಮ್ಮದೇ ಕಂಪನಿ ಉದ್ಯೋಗಿಯಿಂದ ಪಂಗನಾಮ ಹಾಕಿಸಿಕೊಂಡ ಟೈಗರ್ ಶ್ರಾಫ್ ತಾಯಿ!

masthmagaa.com:

ಸ್ನೇಹಿತರೇ ಈಗ ಆನ್‌ಲೈನ್‌ ಮುಖಾಂತರ ಹಣಕ್ಕಾಗಿ ಮೋಸ ಮಾಡೋರು ತುಂಬಾನೇ ಜನ ಇದಾರೆ. ಈ ಹಿಂದೆ ಖ್ಯಾತ ನಟಿ ನಗ್ಮಾ ಅವರಿಗೂ ಕೂಡ ಬ್ಯಾಂಕ್‌ನಿಂದ ಕಾಲ್‌ ಮಾಡ್ತಾ ಇರೋದು ಅಂತ ಹೇಳಿ, OTP ಕೇಳಿದ್ರು, ಯಾವ ಲಕ್ಷ್ಯದಲ್ಲಿದ್ರೋ ಏನೋ ನಗ್ಮಾ ಅವರಿಗೆ OTP ಹೇಳಿದ್ದಾರೆ. OTP ಹೇಳಿದ ಫ್ರ್ಯಾಕ್ಶನ್‌ ಆಫ್‌ ಸೆಕೆಂಡ್‌ನಲ್ಲಿ ಅಕೌಂಟ್‌ನಲ್ಲಿ ಇದ್ದ ದುಡ್ಡೆಲ್ಲಾ ಮಂಗಮಾಯ ಆಗೋಯ್ತು. ಈ ರೀತಿ ಮೋಸ ಮಾಡೋರು , ಮತ್ತು ಮೋಸ ಹೋಗೋರು ನಮ್ಮ ನಡುವೆನೇ ಸುಮಾರ್‌ ಜನ ಇದ್ದಾರೆ. ಈಗ ಬಾಲಿವುಡ್‌ನ ಖ್ಯಾತ ನಟ ಟೈಗರ್‌ ಶ್ರಾಫ್‌ ಅವರ ತಾಯಿ ಆಯೇಶಾ ಶ್ರಾಫ್‌ 58 ಲಕ್ಷ ಕಳೆದುಕೊಂಡಿದ್ದಾರೆ. ಹೇಗೆ ಎಲ್ಲಿ ಏನೂ ಅಂತ ನೋಡೋಣ ಬನ್ನಿ.)

(63 ವರ್ಷದ ಆಯೇಶಾ ಶ್ರಾಫ್‌ ನಟಿ ಮತ್ತು ಮಾಡಲ್‌ ಕೂಡ ಹೌದು. 2000 ನೇ ಇಸ್ವಿಯಲ್ಲಿ ರಿಲೀಸ್‌ ಆದ ಜಿಸ್ ದೇಶ್ ಮೇ ಗಂಗಾ ರೆಹತಾ ಹೈ ಸಿನಿಮಾದ ಮೂಲಕ ಪ್ರೊಡ್ಯೂಸರ್‌ ಆದ್ರು. ಇನ್ನು ಇವರ 58 ಲಕ್ಷ ಕಳುವಾದ ವಿಷಯಕ್ಕೆ ಬರೋದಾದ್ರೆ ಅಲನ್ ಫೆರ್ನಾಂಡಿಸ್ ಎಂಬ ವ್ಯಕ್ತಿ 58 ಲಕ್ಷಮೋಸ ಮಾಡಿದ್ದಾನೆ ಅಂತ FIR ದಾಖಲು ಮಾಡಿದ್ದಾರೆ. ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 408, 465, 467 ಮತ್ತು 468 ಅಡಿಯಲ್ಲಿ ಕೇಸ್‌ ಫೈಲ್‌ ಆಗಿದೆ. )

( ಟೈಗರ್‌ ಶ್ರಾಫ್‌ ಅವರ ಹೆಸರಿನಲ್ಲಿ MMA ಮ್ಯಾಟ್ರಿಕ್ಸ್ ಕಂಪನಿ ಇದೆ. ಈ ಕಂಪನಿಯ ಅಂಡರ್‌ ಅಲ್ಲಿ ಇರುವ ಜಿಮ್‌ಗೆ ಕಿಕ್‌ ಬಾಕ್ಸಿಂಗ್‌ ಅಸೋಸಿಯೇಷನ್‌ನ ಫೈಟರ್‌ ಅಲನ್‌ ಫರ್ನಾಂಡಿಸ್‌ ಅವರನ್ನ 2018ರಲ್ಲಿ ಒಪರೇಟಿಂಗ್‌ ಡೈರೆಕ್ಟರ್‌ ಆಗಿ ನೇಮಕಮಾಡಲಾಗಿತ್ತು. ಈಗ ಸದ್ಯಕ್ಕೆ ಅಲನ್‌ ಫರ್ನಾಂಡಿಸ್‌ ಈ ಸಂಸ್ಥೆಯ ಮೂಲಕ ಭಾರತ ಮತ್ತು ವಿದೇಶಗಳಲ್ಲಿ 11 ಪಂದ್ಯಾವಳಿಯನ್ನ ಆಯೋಜನೆ ಮಾಡೋದಕ್ಕೆ ಹಣ ಸಂಗ್ರಹ ಮಾಡಿದ್ದಾರೆ ಮತ್ತು ತಮ್ಮ ಪರ್ಸನಲ್‌ ಖಾತೆಗೆ 58 ಲಕ್ಷ 53 ಸಾವಿರ ಹಣವನ್ನ ಕ್ರೇಡಿಟ್‌ ಮಾಡಿಕೊಂಡಿದ್ದಾರೆ ಅಂತ FIR ಅಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಆಯೇಶಾ ಶ್ರಾಫ್‌ ಅವರು ಮೇ 3ಕ್ಕೆ ಕಂಪ್ಲೇಂಟ್‌ ಮಾಡಿದ್ರು. ಸೋ ಇವಾಗ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಂಚನೆ ಮತ್ತು ಕ್ರಿಮಿನಲ್‌ ಒಫೆನ್ಸ್‌ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಕೇಸ್‌ ಅನ್ನ ದಾಖಲಿಸಲಾಗಿದೆ.

ಇಷ್ಟೇ ಅಲ್ಲ 2015ರಲ್ಲಿ ಕೂಡ ಆಯೇಶಾ ಶ್ರಾಫ್‌ ಅವರು ನಟ ಸಾಹಿಲ್‌ ಖಾನ್‌ ವಿರುದ್ಧ FIR ಫೈಲ್‌ ಮಾಡಿದ್ರು. 4 ಕೋಟಿ ಹಣ ಕೋಡೋದು ಪೆಂಡಿಂಗ್‌ ಇದೆ, ಇನ್ನೂ ಕೂಡ ಕೊಟ್ಟಿಲ್ಲ ಅಂತ ಕೇಸ್ ಫೈಲ್‌ ಮಾಡಿದ್ರು.

-masthmagaa.comತಮ್ಮದೇ ಕಂಪನಿ ಉದ್ಯೋಗಿಯಿಂದ
ಪಂಗನಾಮ ಹಾಕಿಸಿಕೊಂಡ ಟೈಗರ್ ಶ್ರಾಫ್ ತಾಯಿ!

Contact Us for Advertisement

Leave a Reply