ಇಂದು ಡಾ.ರಾಜ್‌ಕುಮಾರ್‌ ಅವರ 94ನೇ ಜನ್ಮದಿನ

masthmagaa.com:

ಸ್ನೇಹಿತರೇ, ಇವತ್ತು ನಟ ಸಾರ್ವಭೌಮ, ರಸಿಕರ ರಾಜ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್‌ ಅವರ 94 ನೇ ಜನುಮದಿನ. ಸ್ನೇಹಿತರೇ ಅಣ್ಣಾವ್ರು ನಮ್ಮನ್ನೆಲ್ಲ ದೈಹಿಕವಾಗಿ ಬಿಟ್ಟು ಹೋಗಿ ಇವತ್ತಿಗೆ 17 ವರ್ಷ ಆಗಿದೆ. ಆದ್ರೆ, ಈ 17 ಹೋಗಿ 117 ವರ್ಷ ಆದ್ರೂ ಕೂಡ Dr. ರಾಜ್ ಕುಮಾರ್ ನಮ್ಮ ಮನಸ್ಸಲ್ಲೇ ಇರ್ತಾರೆ. Dr. ರಾಜ್ ಕುಮಾರ್ ಕನ್ನಡ ಜನತೆಯ ಮನಸ್ಸುಗಳಲ್ಲಿ ಬಿತ್ತು ಹೋಗಿರುವ ಅಭಿಮಾನ, ಪ್ರೀತಿ ಅಂಥದ್ದು.

ರಾಜ್ ಕುಮಾರ್ ಹೆಸರು ಕೇಳಿದ್‌ ತಕ್ಷಣ ನಮಗೆ ನೆನಪಾಗೋದು ಅವರ ಸರಳತೆ, ನಗು ಮತ್ತು ನಟನೆ. ತಮ್ಮ ಆಕ್ಟಿಂಗ್‌ನಿಂದ 90ರ ವಯಸ್ಸಿನ ಅಜ್ಜನಿಂದ ಹಿಡಿದು ಇಂದಿನ ಕಾಲದ ಮಕ್ಕಳಿಗೂ ಸಹ ರಾಜ್‌ಕುಮಾರ್‌ ಚಿರಪರಿಚಿತ ಅಂತಾನೇ
ಹೇಳಬಹುದು. ಇವತ್ತು ರಾಜ್‌ಕುಮಾರ್‌ ಅವರ 94ನೇ ಜನ್ಮದಿನ. ರಾಜ್‌ಕುಮಾರ್‌ ಅವರು ಇವತ್ತು ನಮ್ಮ ಜೊತೆ ಇದ್ದಿದ್ರೆ ಅವರಿಗೆ 94 ವರ್ಷ ಆಗಿರ್ತಿತ್ತು. ರಾಜ್‌ಕುಮಾರ್‌ ನಮ್ಮ ಜೊತೆ ಭೌತಿಕವಾಗಿ ಇಲ್ಲದೇ ಆಚರಣೆ ಮಾಡ್ತಾ ಇರುವ 17ನೇ ಹುಟ್ಟುಹಬ್ಬ ಇದು.
ಸ್ನೇಹಿತರೇ ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ ಕೆಲವು ಇಂಟರೆಸ್ಟಿಂಗ್ ಮಾಹಿತಿಗಳನ್ನ ನಿಮ್ಮ ಜೊತೆಗೆ ಹಂಚಿಕೊಳ್ಳುವ ಪ್ರಯತ್ನ ನಿಮ್ಮ ಜೊತೆಗೆ ಮಾಡ್ತಾ ಇದ್ದೀವಿ. ಹಾಗಾಗಿ ಈ ವಿಡಿಯೋ ನ ಸಂಪೂರ್ಣವಾಗಿ ನೋಡಿ.

ಸ್ನೇಹಿತರೇ, ರಸಿಕರ ರಾಜ ಅಂತಾನೇ ಕನ್ನಡದ ಸಿನಿಪ್ರೇಮಿಗಳಿಂದ ಕರೆಯಲ್ಪಡುವ ರಾಜ್‌ಕುಮಾರ್‌ ಒಟ್ಟು 205 ಸಿನಿಮಾಗಳಲ್ಲಿ ನಟಿಸಿ ಜನ-ಮನ ಗೆದ್ದಿದ್ದಾರೆ. ಅಣ್ಣಾವ್ರಿಗೆ ಸಿಕ್ಕಿರುವ ಪ್ರಶಸ್ತಿ ಮತ್ತು ಗೌರವಗಳ ಪಟ್ಟಿ ತುಂಬಾ ದೊಡ್ಡದಿದೆ. ಕೆಲವನ್ನು ಹೇಳೋದಾದ್ರೆ ಪದ್ಮಭೂಷಣ ಪ್ರಶಸ್ತಿ, ಅಮೇರಿಕಾ ಸರಕಾರ ಕೊಡುವ ಕೆಂಟುಕಿ ಕರ್ನಲ್ ಪ್ರಶಸ್ತಿ, ಈ ಗೌರವ ರಾಜ್ ಕುಮಾರ್ ಅವರಿಗೆ ಬಿಟ್ರೆ ಬೇರೆ ಯಾವ ನಟನಿಗೂ ಸಿಕ್ಕಿಲ್ಲ. ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ, ಆಂಧ್ರ ಪ್ರದೇಶ ಸರಕಾರ ಕೊಡುವ ಎನ್‌ಟಿಆರ್‌ ನ್ಯಾಷನಲ್‌ ಅವಾರ್ಡ್‌, 11 ಕರ್ನಾಟಕ ರಾಜ್ಯ ಪ್ರಶಸ್ತಿ. 1967ರಲ್ಲಿ ನಟಸಾರ್ವಭೌಮ ಬಿರುದು, 1973 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ, ಈ 1976 ರಲ್ಲಿ ಮೈಸೂರು
ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಅವಾರ್ಡ್ ,8 ಫಿಲ್ಮ್‌ ಫೇರ್‌ ಪ್ರಶಸ್ತಿ, ತಮ್ಮ ಆಕ್ಟಿಂಗ್‌ ಮತ್ತು ಸಿಂಗಿಂಗ್‌ ಗೆ ನ್ಯಾಷನಲ್‌ ಅವಾರ್ಡ್‌ ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೇಳೀತಾನೆ ಹೋಗತ್ತೆ.

ಇನ್ನು ಸ್ನೇಹಿತರೇ ರಾಜ್‌ಕುಮಾರ್‌ ಸಿನಿಮಾಗಳಲ್ಲಿ ಕೆಲವೊಂದು ವಿಷಯಗಳನ್ನ ನೀವು ಗಮನಿಸಿರಬಹುದು. ತಾವು ನಟಿಸುವ ಸಿನಿಮಾಗಳಲ್ಲಿ ಧೂಮಪಾನ ಮದ್ಯಪಾನ ಆಗ್ಲಿ ಯಾವುದನ್ನೂ ಮಾಡ್ತಾ ಇರಲಿಲ್ಲ. ಯಾಕಂದ್ರೆ ತಮ್ಮ ಅಭಿಮಾನಿಗಳಿಗೆ ಅದರಿಂದ ಕೆಟ್ಟ ಸಂದೇಶ ಕೊಟ್ಟ ಹಾಗೆ ಆಗತ್ತೆ ಅನ್ನೋದು ಅದರ
ಹಿಂದಿನ ಉದ್ದೇಶ. ಅಷ್ಟೇ ಯಾಕೆ ಅಣ್ಣಾವ್ರು ಒಮ್ಮೆ ವೈನ್ ಶಾಪ್ ಒಂದರ inauguration ಗೆ ಹೋಗಬೇಕಿತ್ತು. ಆದ್ರೆ ಅಭಿಮಾನಿಯೊಬ್ಬರು ಅಣ್ಣಾ ನಿಮ್ಮ ಸಿನಿಮಾಗಳಲ್ಲಿ ಕೆಟ್ಟ ಅಭ್ಯಾಸಗಳನ್ನು ಪ್ರಚೋದಿಸುವ ಹಾಗೆ ದೃಶ್ಯಗಳೇ ಇರಲ್ಲ ಅಂದಮೇಲೆ ನೀವು ಯಾಕೆ wine shop ಉದ್ಘಾಟನೆಗೆ ಹೋಗುತ್ತೀರಾ, ಹೋಗಬೇಡಿ ಅಂದದ್ದಕ್ಕೆ ಅಣ್ಣಾವ್ರು ಆ ವೈನ್ ಶಾಪ್ inauguration ಗೆ ಹೋಗಲೇ ಇಲ್ಲ.

ಇನ್ನು ಅಣ್ಣಾವ್ರು ಸಿನಿಮಾಗಳನ್ನ ಆಯ್ಕೆ ಮಾಡೋವಾಗ ಕೇವಲ ದುಡ್ಡ್‌ ನೋಡ್ಕೋಂಡು ಇವರು ಸಿನಿಮಾಗೆ ಸಹಿ ಮಾಡ್ತಾ ಇರಲಿಲ್ಲ. ಹಾಗೆ ನೋಡಿದರೆ ರಾಜ್ ಕುಮಾರ್ ಅವರ ಎಷ್ಟೋ ಸಿನಿಮಾಗಳು ಹೈ ಬಡ್ಜೆಟ್ ಸಿನಿಮಾಗಳೇ ಅಲ್ಲ. ಕಥೆ ಮತ್ತು ಸ್ಕ್ರಿಪ್ಟ್ ಎಷ್ಟು ಹಣ ಡಿಮ್ಯಾಂಡ್ ಮಾಡುತ್ತೋ ಅಷ್ಟು ಹಣ ಮಾತ್ರ ರಾಜ್ ಕುಮಾರ್ ಫಿಲ್ಮ್ ಗೆ ಹಾಕಿ ಸಿನಿಮಾ ಮಾಡ್ತಾ ಇದ್ದರು.ಸಿನಿಮಾದಿಂದ ಜನರಿಗೆ ಏನ್‌ ಸಂದೇಶ ಹೋಗತ್ತೆ ಅನ್ನೋದ್ರ ಬಗ್ಗೆನೇ ತುಂಬಾ ಅಳೆದು, ತೋಗ್ ಯೋಚಿಸಿ ರಾಜಣ್ಣ ಸಿನಿಮಾಗೆ ಸಹಿ ಹಾಕ್ತಿದ್ರು.

ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ, ಬಾಂಡ್ ಶೈಲಿಯ ಸಿನಿಮಾಗಳು, ಕಾದಂಬರಿ ಆಧಾರಿತ ಸಿನಿಮಾಗಳು, ಎಲ್ಲ ರೀತಿಯ ಜೋನರ್ ನ ಸಿನಿಮಾಗಳಲ್ಲಿ ರಾಜ್ ಕುಮಾರ್ ಆಕ್ಟ್ ಮಾಡಿದ್ದರು. ಬಂಗಾರದ ಮನುಷ್ಯ ಅಂತಲೇ ಹೆಸರುವಾಸಿಯಾಗಿದ್ದ ರಾಜಣ್ಣ
ನಿಜ ಜೀವನದಲ್ಲೂ ಯಾವತ್ತೂ ಬಂಗಾರ ಹಾಕಿರಲಿಲ್ಲ. ಚೈನ್‌ ಆಗ್ಲಿ, ಉಂಗುರ ಆಗ್ಲಿ, ಯಾವದನ್ನೂ ಯ್ಯೂಸ್‌ ಮಾಡ್ತಾ ಇರಲಿಲ್ಲ. ಅಷ್ಟೆ ಅಲ್ಲ ತಮ್ಮದೇ ಆದ ಸ್ವಂತ ಪ್ರೋಡಕ್ಷನ್‌ ಹೌಸ್‌ ಇದ್ರೂ ಕೂಡ ಅವರು ಯಾವಾಗ್ಲೂ ಹಣಕಾಸಿನ ವ್ಯವಹಾರಕ್ಕೆ ತಲೇನೆ ಹಾಕಿರಲಿಲ್ಲ, ಅಥ್ವಾ ಸಿನಿಮಾದಲ್ಲಿ ಬಂದ ಹಣವನ್ನ ರಾಜ್‌ಕುಮಾರ್‌ ತಗೋಳ್ತಾ ಇರಲಿಲ್ಲ. ಇದೆಲ್ಲದರ ಜವಾಬ್ದಾರಿಯನ್ನ ಅವರ ಹೆಂಡ್ತಿ ಪಾರ್ವತಮ್ಮ ಅವರೇ ನೋಡ್ಕೊಳ್ತಿದ್ರು.
ಇನ್ನು ಸಿನಿಮಾಗಳಲ್ಲಿ ಬಣ್ಣ ಬಣ್ಣದ ಬಟ್ಟೆ ಹಾಕಿ ಮಿಂಚುತ್ತಿದ್ದ ರಾಜಣ್ಣ ಬಿಳಿ ಬಣ್ಣದ ಉಡುಪು ತೋಡೋಕೆ ಒಂದು ಕಾರಣ ಕೂಡ ಇದೆ. ರಾಜಣ್ಣ ಮದ್ರಾಸ್ ನಲ್ಲಿ ಇದ್ದಂಥ ಸಮಯ ಅದು, ಬೆಂಗಳೂರಿಗೆ ಮಧ್ಯೆ ಮಧ್ಯೆ ಬಂದು ಹೋಗುತ್ತಿದ್ದರು. ಒಂದ್ ಸಲ ಚೆನ್ನೈ ಇಂದ ಬೆಂಗಳೂರಿಗೆ ಬಂದ ಅಣ್ಣಾವ್ರು ವಿಮಾನ ನಿಲ್ದಾಣದಿಂದ ಹೊರಗೆ ಬರ್ತಾ ಇರುವಾಗ ಅಲ್ಲಿ ಕಸ ಗುಡಿಸುತ್ತಿದ್ದ ನೌಕರನೊಬ್ಬ ಅಣ್ಣ ನಿಮಗೆ ಬಿಳಿ ಬಣ್ಣ ಸೂಟ್ ಆಗುವಷ್ಟು ಬೇರೆ ಯಾವ ಬಣ್ಣ ಸೂಟ್ ಆಗಲ್ಲ, ಕಲರ್ ಕಲರ್ ಬಟ್ಟೆ ಎಲ್ಲ ಸಿನಿಮಾದಲ್ಲೇ ಸರಿ ಅಂದ್ರು. ಆ ರಾಜ್ ಕುಮಾರ್ ನಕ್ಕು ಆ ನೌಕರನನ್ನು ಚೆನ್ನಾಗಿ ಮಾತಾಡಿಸಿ ಅಲ್ಲಿಂದ ಹೊರಟರು. ಅವತ್ತಿಂದ ಸಿನಿಮಾ ಬಿಟ್ಟು ರಿಯಲ್ ಲೈಫ್ ಅಲ್ಲಿ ಯಾವತ್ತೂ ಬಿಳಿ ಬಣ್ಣ ತೊಡಲೇ ಇಲ್ಲ.

1980ರಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಅಂತ ವರನಟ ಡಾ.ರಾಜ್‌ಕುಮಾರ್‌ ಅವರು ಗೋಕಾಕ್‌ ಚಳುವಳಿಯಲ್ಲಿ ಭಾಗವಿಸಿದ್ದರು. ಗೋಕಾಕ್ ಚಳುವಳಿ ಕನ್ನಡ ಮತ್ತು ಕರ್ನಾಟಕದ ಅಸ್ಮಿತೆಯ ಉಳಿವಿಗಾಗಿ ಆದಂಥ ಬಹುದೊಡ್ಡ ಹೋರಾಟ ಅಂದ್ರೆ ತಪ್ಪಾಗಲ್ಲ.

ಇನ್ನು ರಾಜ್‌ಕುಮಾರ್‌ ಅವರ ಮೂವಿಗಳನ್ನ ಮಕ್ಕಳಿಂದ ಹಿಡಿದ ವಯಸ್ಸಾದವರ ತನಕ ಇಡೀ ಕುಟುಂಬವೇ ಕೂತು ನೋಡಬಹುದು ಅಂತ ಸೆನ್ಸಾರ್‌ ಮಂಡಳಿ ಬಹಳ ಸಲ ಹೇಳಿತ್ತು. ನಟಿಸಿದಂತ ಎಲ್ಲಾ 205 ಸಿನಿಮಾಗಳನ್ನೂ ಕೂಡ ಕುಟುಂಬವೇ ಕೂತು ನೋಡಬಹುದು ಅಂದ್ರೆ ಸ್ಕ್ರಿಪ್ಟ್‌ಗಳನ್ನ ಸೆಲೆಕ್ಷನ್‌ಗೆ ಅವರು ಏಷ್ಟು ಮಹತ್ವ ಕೊಡ್ತಿದ್ರು ಅಂತ ನಮಗೆ ಇದರಲ್ಲೇ ಗೊತ್ತಾಗತ್ತೆ. ಇನ್ನು 2016ರಲ್ಲಿ ಮಹಾರಾಷ್ಟ್ರ ಗೌರ್ನಮೆಂಟ್‌ ಶಾಲೆಯ ಮಕ್ಕಳ ಪಠ್ಯದಲ್ಲಿ ರಾಜ್‌ಕುಮಾರ್‌ ಅವರ ಬಗ್ಗೆಯೂ ಕೂಡ ಒಂದು ಪಾಠವನ್ನ ಸೇರಿಸಿದ್ದಾರೆ. ಬೇರೆ ರಾಜ್ಯದ ಪುಸ್ತಕದಲ್ಲಿ ನಮ್ಮ ಕರ್ನಾಟಕದ ಹೀರೋ ಬಗ್ಗೆ ಇದೆ ಅಂದ್ರೆ ಅದು ನಮಗೆಲ್ಲಾ ಪ್ರೌಢ್‌ ಫೀಲ್‌ ಆಗುವಂತ ಒಂದು ಮೂಮೆಂಟ್‌. ಅಷ್ಟೇ ಅಲ್ಲ 2013ರಲ್ಲಿ ಫೊರ್ಬ್ಸ್‌ ಇಂಡಿಯಾ ಸಂಸ್ಥೆ “ಆಲ್‌ ಟೈಮ್‌ ಗ್ರೇಟ್‌
Performances’ ಅಡಿಯಲ್ಲಿ ಬಿಡುಗಡೆ ಮಾಡಿದ 25 ಮೂವಿಗಳ ಈ ಲಿಸ್ಟ್‌ನಲ್ಲಿ ಡಾ. ರಾಜ್‌ಕುಮಾರ್‌ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ಕೂಡ ಇದೆ.

2017ರಲ್ಲಿ ಇದೇ ದಿನ ಅಂದ್ರೆ ಎಪ್ರಿಲ್‌ 24ಕ್ಕೆ ಗೂಗಲ್‌ ರಾಜ್‌ಕುಮಾರ್‌ ಅವರ ಫೋಟೊವನ್ನ ಡೂಡಲ್‌ ಮಾಡಿ ಬರ್ತ್‌ಡೇ ಗೆ ವಿಶ್‌ ಮಾಡುವ ಮೂಲಕ ಅಣ್ಣಾವ್ರಿಗೆ ಗೌರವ ಸಲ್ಲಿಸಿತ್ತು. 1994, ಜನವರಿ 27ಕ್ಕೆ ಬೆಂಗಳೂರಿನ ಸ್ಯಾಂಡಲ್‌ವುಡ್‌ ಪ್ಯಾಕ್ಟರಿಯಿಂದ ಮಾಗಡಿ ರೋಡ್‌ ತನಕ ಸುಮಾರು 6ಕಿ.ಮೀ ವರೆಗೆ ಡಾ.ರಾಜ್‌ಕುಮಾರ್‌ ರೋಡ್‌ ಅಂತ ನಾಮಕರಣ ಮಾಡಿದ್ದಾರೆ.

ರಾಜ್‌ಕುಮಾರ್‌ ಅವರ ಸಾವಿನ ನಂತರ ನಾಯಂಡ ಹಳ್ಳಿ ರೋಡ್‌ನಿಂದ ತುಮಕೂರು ರೋಡ್‌ ತನಕ ಸುಮಾರು 11.5 ಕಿ.ಮಿವರೆಗೆ “ಡಾ.ರಾಜ್‌ಕುಮಾರ್‌ ಪುಣ್ಯಭೂಮಿ ರಸ್ತೆ” ಅಂತ ಹೆಸರಿಟ್ರು. ಇಡೀ ಕರ್ನಾಟಕದಲ್ಲಿ 3 ಸಾವಿರದಷ್ಟು ರಾಜ್‌ಕುಮಾರ್‌ ಅವರ ಸ್ಟಾಚ್ಯೂವನ್ನ ಅವರ ಅಭಿಮಾನಿಗಳು ನಿರ್ಮಾಣ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply