ಬೆಳಗಾವಿ, ಧಾರವಾಡ, ಕಲಬುರಗಿ: ಪಾಲಿಕೆ ಫಲಿತಾಂಶ ಇಲ್ಲಿದೆ..

masthmagaa.com:

ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆದಿತ್ತು. ಇವತ್ತು ಫಲಿತಾಂಶ ಪ್ರಕಟವಾಗಿದೆ. ಹಾಗಾದ್ರೆ ಯಾವ ಪಾಲಿಕೆಯಲ್ಲಿ ಯಾರು ಎಷ್ಟೆಷ್ಟು ಸೀಟು ಗೆದ್ದಿದ್ದಾರೆ ಅಂತ ನೋಡೋಣ..

ಬೆಳಗಾವಿ ಮಹಾನಗರ ಪಾಲಿಕೆ
ಒಟ್ಟು 58 ಸ್ಥಾನ
ಬಿಜೆಪಿ- 35
ಕಾಂಗ್ರೆಸ್- 10
ಪಕ್ಷೇತರ- 12
ಎಐಎಂಐಎಂ- 1

ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿದೆ. ಕಾಂಗ್ರೆಸ್-ಎಂಇಎಸ್​​ಗೆ ಬಾರಿ ಮುಖಭಂಗವಾಗಿದೆ. 1984ರಿಂದಲೂ ಇಲ್ಲಿ ಎಂಇಎಸ್​​ ಅಧಿಕಾರದಲ್ಲಿತ್ತು. ಹೀಗಾಗಿ ಈ ಸಲ ಎಂಇಎಸ್ ಸೋಲಿಸಿ ಇತಿಹಾಸ ಸೃಷ್ಟಿಸಿದೆ ಬಿಜೆಪಿ..

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಒಟ್ಟು 82 ಸ್ಥಾನಗಳು
ಬಿಜೆಪಿ- 39
ಕಾಂಗ್ರೆಸ್- 33
ಪಕ್ಷೇತರ- 6
ಎಐಎಂಐಎಂ- 3
ಜೆಡಿಎಸ್- 1

ಒಟ್ಟು 82 ಸ್ಥಾನಗಳಲ್ಲಿ ಸರಳ ಬಹುಮತಕ್ಕೆ 42 ಸ್ಥಾನ ಗಳಿಸಬೇಕಿತ್ತು. ಬಿಜೆಪಿ 39 ಸ್ಥಾನ ಗಳಿಸಿದೆ. ಇವರ ಜೊತೆಗೆ ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರ ಮತ ಸೇರೋದ್ರಿಂದ 3ನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ.

ಕಲಬುರಗಿ ಮಹಾನಗರ ಪಾಲಿಕೆ
ಒಟ್ಟು 55 ಸ್ಥಾನಗಳು
ಕಾಂಗ್ರೆಸ್- 27
ಬಿಜೆಪಿ- 23
ಜೆಡಿಎಸ್- 4
ಪಕ್ಷೇತರ- 1

ಸಂಸದರು ಶಾಸಕರೆಲ್ಲಾ ಸೇರಿದ್ರೆ 63 ಸ್ಥಾನ ಆಗುತ್ತೆ. ಸೋ ಬಹುಮತಕ್ಕೆ 32 ಸದಸ್ಯರ ಬೆಂಬಲ ಬೇಕು.. ಹೀಗಾಗಿ ಇಲ್ಲಿ ಜೆಡಿಎಸ್​​ ನಿರ್ಣಾಯಕ ಪಾತ್ರ ವಹಿಸಲಿದ್ದು, ಕಿಂಗ್​ಮೇಕರ್ ಆಗಲಿದೆ.

-masthmagaa.com

Contact Us for Advertisement

Leave a Reply