ಭೂತಾನ್‌ ಕ್ಷಿಪ್ರಕ್ರಾಂತಿ ಕುತಂತ್ರ ಫ್ಲಾಪ್!‌ ಮೂವರ ಬಂಧನ

masthmagaa.com

ನಮ್ಮ ನೆರೆಯ ಫ್ರೆಂಡ್ಲಿ ದೇಶ ಭೂತಾನ್​​ನಲ್ಲೂ ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರ ಬದಲಾವಣಗೆ ಪ್ಲಾನ್ ಮಾಡಲಾಗಿತ್ತು ಅಂತಾ ಗೊತ್ತಾಗಿದೆ. ಆದ್ರೆ ಅದು ಯಶಸ್ವಿಯಾಗುವಷ್ಟರಲ್ಲಿ ಭೂತಾನ್ ಪೊಲೀಸರು ಒಟ್ಟು ಮೂವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತರಲ್ಲಿ ಒಬ್ಬ ಹಿರಿಯ ಸೇನಾ ಅಧಿಕಾರಿ ಬ್ರಿಗೇಡಿಯರ್ ಥಿನ್ಲೇ ತೋಗ್ಬೆ, ಮತ್ತೊಬ್ಬ ಸುಪ್ರೀಂ ಕೋರ್ಟ್ ಜಡ್ಜ್ ಕ್ಯೂನ್ಲೇ ಶೆರಿಂಗ್ ಇನ್ನೊಬ್ಬ ಹಿರಿಯ ಜಿಲ್ಲಾ ನ್ಯಾಯಾಧೀಶ ಯೇಶೇ ದೋರ್ಜಿ.

ಇವರ ವಿರುದ್ಧ ದೇಶದ ಸರ್ವೋಚ್ಚ ಸೇನಾ ನಾಯಕ ಲೆಫ್ಟಿನಂಟ್ ಜೆನೆರಲ್ ಬಾಟೂ ಶೆರಿಂಗ್ ಹಾಗೂ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಲ್ಯೋಂಪೋ ಚೋಗ್ಯಾಲ್ ದಾಗೋರನ್ನ ಕಿತ್ತೆಸೆಯಲು ಷಡ್ಯಂತ್ರ ಹೂಡಿದ ಆರೋಪ ಇದೆ. ಇವರಿಬ್ಬರನ್ನ ಬದಲಾಯಿಸಿಬಿಟ್ಟರೆ ನಂತರ ಇಡೀ ಭೂತಾನ್ ಅಧಿಕಾರ ತಮ್ಮ ಕೈಗೆ ಸಿಗುತ್ತೆ, ರಾಜನನ್ನೂ ಕೈಗೊಂಬೆ ಮಾಡಿಕೊಳ್ಳಬಹುದು ಅನ್ನೋದು ಇವರ ಪ್ಲಾನ್ ಆಗಿತ್ತು, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಹಾಕಿಸಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಬೇಕು ಅಂತಾ ಯೋಜನೆ ರೂಪಿಸಿದ್ದರು ಅಂತಾ ವರದಿಯಾಗಿದೆ.

-masthmagaa.com

Contact Us for Advertisement

Leave a Reply