ಭಾರತಕ್ಕೆ ಅಮೆರಿಕದಿಂದ 6 ಕೋಟಿ ಡೋಸ್ ಲಸಿಕೆ!?

masthmagaa.com:

ಭಾರತಕ್ಕೆ 60 ಮಿಲಿಯನ್ ಅಂದ್ರೆ 6 ಕೋಟಿ ಅಸ್ಟ್ರಾಜೆನಕಾ ಲಸಿಕೆ ಕಳುಹಿಸಬೇಕು ಅಂತ ಜೋ ಬೈಡೆನ್ ಸರ್ಕಾರಕ್ಕೆ ಅಮೆರಿಕದ ಟಾಪ್ ನಾಗರಿಕ ಹಕ್ಕು ಹೋರಾಟಗಾರ ಒತ್ತಾಯಿಸಿದ್ದಾರೆ. ಅಮೆರಿಕದಲ್ಲಿ ಇನ್ನೂ ಕೂಡ ಅಸ್ಟ್ರಾಜೆನೆಕಾ ಲಸಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಾಗಿ ಅಸ್ಟ್ರಜನೆಕಾ ಲಸಿಕೆ ಅಮೆರಿಕದಲ್ಲಿ ಬಳಕೆಯಾಗುತ್ತಿಲ್ಲ. ಅದನ್ನು ಭಾರತ, ಬ್ರೆಜಿಲ್ ಸೇರಿದಂತೆ ಅಗತ್ಯವಿರೋ ದೇಶಗಳಿಗೆ ಜುಲೈ ವೇಳೆಗೆ ನೀಡೋದಾಗಿ ಇತ್ತೀಚೆಗಷ್ಟೇ ಅಧ್ಯಕ್ಷ ಜೋ ಬೈಡೆನ್ ಹೇಳಿದ್ರು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ನಾಗರಿಕ ಹಕ್ಕು ಹೋರಾಟಗಾರ ರೆವ್ ಜೆಸ್ಸಿ ಜಾಕ್ಸನ್, ಈಗಿಂದೀಗಲೇ ಭಾರತಕ್ಕೆ 6 ಕೋಟಿ ಕೊರೋನಾ ಡೋಸ್ ನೀಡುವಂತೆ ಜೋ ಬೈಡೆನ್ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇನೆ ಅಂತ ಹೇಳಿದ್ದಾರೆ. ಇಂಥಾ ಹೊತ್ತಲ್ಲಿ 6 ಕೋಟಿ ಡೋಸ್ ಅಸ್ಟ್ರಾಜೆನೆಕಾ ಲಸಿಕೆ ಸಿಕ್ರೆ ಭಾರತಕ್ಕೆ ತುಂಬಾ ಹೆಲ್ಪ ಆಗುತ್ತೆ..

-masthmagaa.com

Contact Us for Advertisement

Leave a Reply