ಪಾಕಿಸ್ತಾನದಲ್ಲಿ ಪ್ರವಾಸಿ ಸ್ಥಳಗಳು ಬಂದ್!

masthmagaa.com:

ಪಾಕಿಸ್ತಾನದಲ್ಲೂ ಕೊರೋನಾ ದಿನೇ ದಿನೇ ಜಾಸ್ತಿಯಾಗುತ್ತಿದ್ದು, ಎಲ್ಲಾ ಪ್ರವಾಸಿ ಸ್ಥಳಗಳನ್ನು ಮೇ 16ವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ನಿನ್ನೆ ನಡೆದ ನ್ಯಾಷನಲ್ ಕಮಾಂಡ್ ಮತ್ತು ಆಪರೇಷನ್ ಸೆಂಟರ್​​​​​​​​ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೇ ಪ್ರವಾಸಿ ಸ್ಥಳಗಳಿಗೆ ಬಂದ್ರೂ ಪ್ರವೇಶ ನೀಡಲು ನಿರಾಕರಿಸಬೇಕು ಅಂತ ಸೂಚಿಸಲಾಗಿದೆ. ಅಷ್ಟೇ ಅಲ್ಲ.. ಮೇ 16ರವರೆಗೆ ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಕೂಡ ಬಂದ್ ಇರಲಿದೆ. 12ರಂದು ರಂಜಾನ್ ಹಬ್ಬ ಇರೋದ್ರಿಂದ ಕೊರೋನಾ ಸೋಂಕು ಕೂಡ ಹೆಚ್ಚುತ್ತಿರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.‌

-masthmagaa.com

Contact Us for Advertisement

Leave a Reply