ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಗುಡ್ ನ್ಯೂಸ್..!

ವಾಹನ ಸವಾರರಿಗೆ ಕೊನೆಗೂ ರಾಜ್ಯ ಸರ್ಕಾರ ರಿಲೀಫ್ ಕೊಟ್ಟಿದೆ. ಈ ಸಂಬಂಧ ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿತ್ತು. ಇದಕ್ಕೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಇದ್ರ ಬೆನ್ನಲ್ಲೆ ಗುಜರಾತ್‍ನ ಬಿಜೆಪಿ ಸರ್ಕಾರ ಕೇಂದ್ರದ ಮೋಟಾರು ವಾಹನ ಕಾಯ್ದೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಾರ್ವಜನಿಕರಿಗೆ ರಿಲೀಫ್ ನೀಡಿತ್ತು. ಅದರಂತೆ ರಾಜ್ಯದಲ್ಲೂ ದಂಡದ ಪ್ರಮಾಣ ಇಳಿಸಲು ಯಡಿಯೂರಪ್ಪ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಗುಜರಾತ್‍ನ ನಿಯಮಾವಳಿಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈಗ ಅದರಂತೆ ದಂಡದ ಪ್ರಮಾಣವನ್ನು ಇಳಿಸಿ ಸರ್ಕಾರ ಆದೇಶ ಹೊರಡಿಸಿದೆ.\

ಆದ್ರೆ ಹೆಲ್ಮೆಟ್ ಧರಿಸದಿದ್ರೆ 500 ರೂ. ದಂಡ. ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇನ್ನು ಲೈಸೆನ್ಸ್ ಇಲ್ಲದವರಿಗೆ ಮೊದಲು 5 ಸಾವಿರ ಇದ್ದ ದಂಡವನ್ನು ಈಗ 1 ಸಾವಿರಕ್ಕೆ ಇಳಿಸಲಾಗಿದೆ.

Contact Us for Advertisement

Leave a Reply