ಇನ್ಮೇಲೆ ಭೂಕಂಪದಲ್ಲಿ ಸಿಲುಕಿದವರನ್ನ ರಕ್ಷಿಸಲಿವೆ ಇಲಿಗಳು! ಹೆಂಗೆ ಗೊತ್ತಾ?

masthmagaa.com:

ಭೂಕಂಪ ಆದ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಲಿಗಳನ್ನ ಬಳಸೋಕೆ ವಿಜ್ಞಾನಿಗಳು ಮುಂದಾಗಿದ್ದಾರೆ. ಚಿಕ್ಕ ಚಿಕ್ಕ ಬ್ಯಾಕ್‌ಪ್ಯಾಕ್‌ಗಳನ್ನ ಹಾಕಿಕೊಂಡ ಇಲಿಗಳು ಕಟ್ಟಡ, ಮಣ್ಣಿನ ಅವಶೇಷಗಳಡಿಯಲ್ಲಿ ಸಿಲುಕಿರೋ ಜನ್ರಿಗೆ ಮೈಕ್ರೋಫೋನ್‌ ಒದಗಿಸುತ್ವೆ. ಇದ್ರಿಂದ ಸಂತ್ರಸ್ತರ ಜೊತೆಗೆ ರಕ್ಷಣಾ ಕಾರ್ಯ ನಡೆಸ್ತಾ ಇರೋರು ಮಾತಾಡಬಹುದು ಅಂತ ಸ್ಕಾಟ್ಲೆಂಡ್‌ನ ಸಂಶೋಧಕ ಡಾ. ಡೊನ್ನಾ ಕೀನ್‌ ಹೇಳಿದ್ದಾರೆ. ಇದಕ್ಕಾಗಿ ಈಗ 170 ಇಲಿಗಳನ್ನ ಟ್ರೈನ್‌ ಮಾಡಲಾಗ್ತಾ ಇದ್ದು, ಅದ್ರಲ್ಲಿ ಈಗಾಗ್ಲೇ 7 ಇಲಿಗಳು ಬೀಪ್‌ ಸೌಂಡ್‌ಗೆ ಸ್ಪಂದಿಸ್ತಾ ಇವೆ ಅಂತ ಹೇಳಲಾಗಿದೆ. ಇನ್ನು ಮುಂದುವರೆದು ಮಾತಾಡಿರೋ ಡಾ. ಕೀನ್‌, ಇಲಿಗಳು ಅಂದ್ರೆ ನಾವು ಅನ್‌ಹೈಜೆನಿಕ್‌ ಅಂತ ಅಸಹ್ಯಪಟ್ಕೋತೀವಿ. ಆದ್ರೆ ಅವುಗಳನ್ನ Sociable ಅಂದ್ರೆ ಸಂಗಶೀಲ ಜೀವಿಗಳನ್ನಾಗಿ ಮಾರ್ಪಾಡು ಮಾಡಬಹುದು. ಚಿಕ್ಕ ಕಿರಿದಾದ ಜಾಗಗಳಲ್ಲಿ ವೇಗವಾಗಿ ಹೋಗೋಕೆ ಇಲಿಗಳಿಗೆ ಮಾತ್ರ ಸಾಧ್ಯ ಅಂತ ಹೇಳಿದ್ದಾರೆ. ಇನ್ನು ಮುಂದಿನ ಹಂತದಲ್ಲಿ ಇವುಗಳಿಗೆ ಚಿಕ್ಕ ಕ್ಯಾಮೆರಾ, ಲೊಕೇಷನ್‌ ಟ್ರ್ಯಾಕರ್‌ ಅಂದ್ರೆ ಸ್ಥಳ ಪತ್ತೆ ಹಚ್ಚುವ ಯಂತ್ರಗಳನ್ನ ಹೊತ್ತೊಯ್ಯಲು ಕಲಿಸಲಾಗುತ್ತೆ. ಪದೇ ಪದೇ ಭೂಕಂಪ ಆಗೋ ಟರ್ಕಿಯಲ್ಲಿ ಮೊದಲು ಇವುಗಳನ್ನ ಪರೀಕ್ಷೆ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply