ನವಾಬನ ಕಾಲದ ಖಜಾನೆ ಪತ್ತೆ..! ಬಾಗಿಲು ತೆರೆಯಲು ಆಗದೇ ಪರದಾಟ..!

ಉತ್ತರಪ್ರದೇಶ:ಭಾರತದಲ್ಲಿ ರಾಜಪ್ರಭುತ್ವ ಅಂತ್ಯಗೊಂಡು ತುಂಬಾ ಸಮಯ ಕಳೆದೋಗಿದೆ. ಆದ್ರೆ ಆಗಿನ ಕಾಲದಲ್ಲಿ ಅವರು ಬಚ್ಚಿಟ್ಟ ಖಜಾನೆಗಳು ಮಾತ್ರ ಇಂದಿಗೂ ಒಂದೊಂದಾಗೇ ಹೊರಗೆ ಬರುತ್ತಲೇ ಇವೆ. ಇದೀಗ ಈ ಪಟ್ಟಿಗೆ ರಾಂಪುರ ಕೂಡ ಸೇರಿಕೊಂಡಿದೆ. ಇಲ್ಲಿ ಕೊನೆಯದಾಗಿ ಆಳುತ್ತಿದ್ದ ನವಾಬ ಅಲಿಖಾನ್ ನಿಧಿಯ ಕೋಣೆ ಪತ್ತೆಯಾಗಿದೆ ಅಂತ ಹೇಳಲಾಗುತ್ತಿದೆ. ಆದ್ರೆ ಇದನ್ನು ಬ್ರಿಟನ್ ಮೂಲದ ಕಂಪನಿಯೊಂದು ನಿರ್ಮಿಸಿದ್ದು, ಕೀ ಇಲ್ಲದೇ ಇನ್ನನು ತೆರೆಯಲು ಸಾಧ್ಯವೇ ಇಲ್ಲ. ಬಾಂಬ್ ಬ್ಲಾಸ್ಟ್ ಮಾಡಿದ್ರೂ ಈ ಕೋಣೆ ಓಪನ್ ಆಗಲ್ಲ ಅಂತ ಹೇಳಲಾಗುತ್ತಿದೆ.

ಈಗಾಗಲೇ ಅಲಿಖಾನ್​​ನ ಆಸ್ತಿ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದ್ದು,ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಶಿಯಾ ಕಾನೂನಿನ ಪ್ರಕಾರ ಈ ಆಸ್ತಿಯನ್ನು ಎಲ್ಲಾ ಅಲಿಖಾನ್​​ನ 16 ಉತ್ತರಾಧಿಕಾರಿಗಳ ನಡುವೆ ಹಂಚಬೇಕೆಂದು ನಿರ್ಧರಿಸಲಾಗಿದೆ. ಈಗ ಅಲಿಖಾನ್ ಆಸ್ತಿಯ ಪಟ್ಟಿಗೆ ಈ ಖಜಾನೆ ಕೂಡ ಸೇರಿಕೊಂಡಿದೆ. ಈ ಕೋಣೆಯನ್ನು ತೆರೆಯಲು ನ್ಯಾಯಾಲಯ ಆದೇಶಿಸಿದ್ದು, 3 ದಿನಗಳ ಕಾಲ ಪ್ರಯತ್ನಿಸಿದ್ರೂ ಅದರ ಬಾಗಿಲು ತೆರೆಯಲು ಸಾಧ್ಯವಾಗಲೇ ಇಲ್ಲ. ಬ್ರಿಟನ್​​​​ ಮೂಲದ ಪ್ರಸಿದ್ಧ ಕಂಪನಿಯಾದ ಚಬ್, ಈ ಲಾಕರ್ ನಿರ್ಮಿಸಿತ್ತು. ಈ ಕಂಪನಿಯ ಪ್ರಕಾರ ಕೀ ಇಲ್ಲದೇ ಅದನ್ನು ತೆರೆಯಲು ಸಾಧ್ಯವೇ ಇಲ್ಲ. ಅದರ ಗೋಡೆಗಳನ್ನು ಕಬ್ಬಿಣದಿಂದ ನಿರ್ಮಿಸಿದ್ದು, ಬಾಂಬ್ ಬ್ಲಾಸ್ಟ್ ಆದ್ರೂ ಅದು ಓಪನ್ ಆಗಲ್ಲ. ಈ ಕಂಪನಿ ಈ ಹಿಂದೆಯೂ ಹಲವು ಬ್ಯಾಂಕ್​​​ಗಳಿಗೆ ಲಾಕರ್​​ಗಳನ್ನು ನಿರ್ಮಿಸಿಕೊಟ್ಟಿತ್ತು.

Contact Us for Advertisement

Leave a Reply