ಸೌತ್ ಕೊರಿಯಾ ಅಧ್ಯಕ್ಷ ದುರ್ಬಲ ನಾಯಕ: ಟ್ರಂಪ್

masthmagaa.com:

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಮ್ ಜಾನ್ ಉನ್ ಬಗ್ಗೆ ಹೊಗಳಿ, ಸೌತ್ ಕೊರಿಯಾ ಅಧ್ಯಕ್ಷ ಬಗ್ಗೆ ಸರಿಯಾಗಿ ಜಾಡಿಸಿದ್ದಾರೆ. ಮಿತ್ರರಾಷ್ಟ್ರವಾದ ಸೌತ್ ಕೊರಿಯಾ ವಿರುದ್ಧ ಮಾತನಾಡಿರೋ ಟ್ರಂಪ್, ಸೌತ್ ಕೊರಿಯಾ ಅಮೆರಿಕಾಗೆ ಮೋಸ ಮಾಡ್ತಿದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಯಾವತ್ತೂ ಸೌತ್ ಕೊರಿಯಾದ ಅಧ್ಯಕ್ಷ ಮೂನ್ ಜಾ ಇನ್​​ಗೆ ಗೌರವ ನೀಡಲಿಲ್ಲ. ಮೂನ್ ತುಂಬಾ ದುರ್ಬಲ ನಾಯಕ. ಅಮೆರಿಕಕ್ಕೆ ನಿರಂತರವಾಗಿ ಮೋಸ ಮಾಡುತ್ತಲೇ ಬಂದಿದ್ದಾರೆ. ನಮ್ಮನ್ನು ದಶಕಗಳಿಂದ ಮೂರ್ಖರಂತೆ ಪರಿಗಣಿಸಿದ್ದಾರೆ. ಆದ್ರೂ ಕೂಡ ನಾನು ಮಿಲಿಟರಿ ರಕ್ಷಣೆ ಮತ್ತು ಸೇವೆಗಳಿಗಾಗಿ ಕೋಟಿಗಟ್ಟಲೆ ದುಡ್ಡು ಕೊಡಲು ಹೇಳಿದ್ದೆ. ಆದ್ರೆ ಬೈಡೆನ್ ಆಡಳಿತ ಅದನ್ನು ಕೇಳುತ್ತಲೇ ಇಲ್ಲ ಅಂತ ಟ್ರಂಪ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply