ಪಾಕಿಸ್ತಾನಕ್ಕೆ ಎಫ್​ಎಟಿಎಫ್​​​​ ಬಿಗ್ ಶಾಕ್!

masthmagaa.com:

ಎಫ್​ಎಟಿಎಫ್​​ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್​​​ನ ಗ್ರೇ ಲಿಸ್ಟ್​​ನಿಂದ ಈ ಸಲ ಆದ್ರೂ ಹೊರಗೆ ಬರಬಹುದು.. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ದುಡ್ಡು ಸಿಗಬಹುದು ಅಂತ ಭಾರಿ ಆಸೆಯಿಂದ ಕಾದುಕೂತಿದ್ದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಪ್ಯಾರಿಸ್​​ನಲ್ಲಿ 3 ದಿನಗಳ ಕಾಲ ನಡೆದ ಎಫ್​ಎಟಿಎಫ್ ಸಭೆಯಲ್ಲಿ ಪಾಕಿಸ್ತಾನವನ್ನು ಮತ್ತೆ ಗ್ರೇ ಲಿಸ್ಟ್​​​ನಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ. ಭಾರತದ ಮೋಸ್ಟ್​ ವಾಂಟೆಡ್​ ಉಗ್ರ ಹಫೀಜ್ ಸಯೀದ್, ಮಸೂದ್​ ಅಝರ್​​​ ಮತ್ತು ಅವರ ನೇತೃತ್ವದ ಗುಂಪಿನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಹೆಜ್ಜೆ ಇಡಲಾಗಿದೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್​​ ಅಧ್ಯಕ್ಷ ಮಾರ್ಕಸ್ ಪ್ಲೆಯರ್, ಪಾಕಿಸ್ತಾನವನ್ನು 2022ರ ಏಪ್ರಿಲ್​​ವರೆಗೂ ಗ್ರೇಲಿಸ್ಟ್​ನಲ್ಲೇ ಮುಂದುವರಿಸೋ ನಿರ್ಧಾರ ಪ್ರಕಟಿಸಿದ್ದಾರೆ. ಅಂದಹಾಗೆ ಪಾಕಿಸ್ತಾನವನ್ನು 2018ರಿಂದಲೂ ಈ ಗ್ರೇ ಲಿಸ್ಟ್​​ನಲ್ಲೇ ಇಡಲಾಗಿದೆ. ಫೈನಾನ್ಶಿಯಲ್​​ ಆಕ್ಷನ್​ ಟಾಸ್ಕ್​ ಫೋರ್ಸ್​​​ ಅನ್ನೋದು ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವಿನ ಮೇಲೆ ನಿಗಾ ಇಡುವ ಸಂಸ್ಥೆಯಾಗಿದೆ. ಇದರ ಗ್ರೇ ಲಿಸ್ಟ್​​​ನಲ್ಲಿರೋ ದೇಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಸಿಗೋದು ಕಷ್ಟವಾಗುತ್ತೆ. ಈಗಾಗಲೇ ಸಾಲದ ಹೊಣೆಯಿಂದ ಬಗ್ಗಿಹೋಗಿರೋ ಪಾಕಿಸ್ತಾನಕ್ಕೆ ಎಫ್​ಎಟಿಫ್ ಗ್ರೇ ಲಿಸ್ಟ್​​​​​​​​ ಗಾಯದ ಮೇಲೆ ಬರೆ ಎಳೆದಂತಾಗಿದೆ.

-masthmagaa.com

Contact Us for Advertisement

Leave a Reply