UAEನಲ್ಲಿ ಮೊದಲ ಬಾರಿಗೆ ಕಾರ್ಪೊರೇಟ್​ ಟ್ಯಾಕ್ಸ್ ಜಾರಿ.. ಇದರ ಹಿಂದಿನ ಕಾರಣವೇನು ಗೊತ್ತೇ?

masthmagaa.com:

2023ರ ಜೂನ್​​ 1ರಿಂದ ಕಾರ್ಪೋರೇಟ್ ಟ್ಯಾಕ್ಸ್​ ಅನ್ನ ಜಾರಿಗೆ ತರೋದಾಗಿ ಯುನೈಟೆಡ್​ ಅರಬ್ ಎಮಿರೇಟ್ಸ್ ಮಹತ್ವದ ಘೋಷಣೆ ಮಾಡಿದೆ. ಯುಎಇಎಲ್ಲಿ ಕಾರ್ಪೊರೇಟ್​ ಟ್ಯಾಕ್ಸ್ ಜಾರಿಗೆ ತರ್ತಿರೋದು ಇದೇ ಫಸ್ಟ್ ಟೈಂ. ಆದ್ರೆ ಬಹುತೇಕ ದೇಶಗಳಿಗೆ ಹೋಲಿಸಿದ್ರೆ ಯುಎಇನ ಕಾರ್ಪೋರೇಟ್ ಟ್ಯಾಕ್ಸ್ ಕಮ್ಮಿ ಇರಲಿದೆ. 9 ಪರ್ಸೆಂಟ್​ ಇರಲಿದೆ ಅಂತ ಯುಎಇ ಘೋಷಿಸಿದೆ. ಇದು ತೆರಿಗೆ ಪಾರದರ್ಶಕತೆಗೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಯುಎಇ ಬದ್ಧವಾಗಿದೆ ಮತ್ತು ಟ್ಯಾಕ್ಸ್​ ಕಳ್ಳತನ ತಡೆಯಲು ಕೂಡ ಬದ್ಧವಾಗಿದೆ ಅನ್ನೋದನ್ನ ತೋರಿಸಿಕೊಡುವಂತಿದೆ ಅಂತ ಯುಎಇ ಹೇಳಿದೆ. ಅಂದ್ಹಾಗೆ ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಆರ್ಥಿಕ ನೆರವು ಸಿಗೋದನ್ನ ತಡೆಯಲು ಯುಎಇ ತೆಗೆದುಕೊಳ್ತಿರೋ ಕ್ರಮಗಳು ಕಮ್ಮಿಯಾಗಿವೆ. ಹೀಗಾಗಿ ಯುಎಇ ಅನ್ನ ಗ್ರೇ ಲಿಸ್ಟ್​ಗೆ ಸೇರಿಸಬೇಕಾ ಅಂತ FATF ಚರ್ಚೆ ನಡೆಸ್ತಿರುವಾಗಲೇ ಯುಎಇ ಕಾರ್ಪೋರೇಟ್​ ಟ್ಯಾಕ್ಸ್​ ಅನ್ನ ಇಂಟ್ರಡ್ಯೂಸ್​ ಮಾಡ್ತಿರೋದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply