ಮದ್ಯ ಬೆಲೆ ಕಡಿಮೆ ಮಾಡಿ ಇಲ್ಲವೇ ಬೆಳಿಗ್ಗೆ-ರಾತ್ರಿ ನೈಂಟಿ ಉಚಿತ ಕೊಡಿ: ಮದ್ಯ ಪ್ರಿಯರು

masthmagaa.com:

ಇತ್ತೀಚೆಗೆ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮದ್ಯದ ಬೆಲೆ ಹೆಚ್ಚಳ ಮಾಡಿ ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಮದ್ಯ ಪ್ರಿಯರು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಉಡುಪಿಯ ಚಿತ್ತರಂಜನ್ ಸರ್ಕಲ್​ನಲ್ಲಿ ಕುಡುಕರಿಗೆ ಹಾರ ಹಾಕಿ ಸನ್ಮಾನ ಮಾಡಲಾಗಿದೆ. ಸರ್ಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುತ್ತೆ. ಮದ್ಯದ ಬೆಲೆ ಇಳಿಕೆ ಮಾಡಿ. ಇಲ್ಲ ಅಂದ್ರೆ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ. ಅದು ಆಗದಿದ್ದಲ್ಲಿ ಸಾರಾಯಿ ಸಂಪೂರ್ಣ ಬಂದ್ ಮಾಡಿ. ಆ ಹಣವನ್ನ ನಾವು ನಮ್ಮ ಹೆಂಡತಿ, ಮಕ್ಕಳಿಗೆ ನೀಡುತ್ತೇವೆ. ನಮ್ಮ ಹೆಂಡತಿ, ಮಕ್ಕಳನ್ನ ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೇವೆ ಅಂತ ಮದ್ಯ ಪ್ರಿಯರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಅಬಕಾರಿ ಸುಂಕ ಏರಿ ಮಾಡಿದ ಹಿನ್ನಲೆ ಕರ್ನಾಟಕ ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಇನ್ನು ತಮಿಳುನಾಡಿನಲ್ಲಿ 650ml ಬಿಯರ್‌ಗೆ 210 ರೂ. ದೆಹಲಿಯಲ್ಲಿ 190ರೂ. ಕರ್ನಾಟಕದಲ್ಲಿ 187 ರೂ. ಇದೆ. ಈ ಮೂಲಕ ಬಿಯರ್​ ಬೆಲೆ ಏರಿಕೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply