7ನೇ ಮಗುವಿನ ತಂದೆಯಾದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್!

masthmagaa.com:
ಯುನೈಟೆಡ್ ಕಿಂಗ್​ಡಮ್​​​​ನ ಪ್ರಧಾನಿ ಬೋರಿಸ್ ಜಾನ್ಸನ್ 7ನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಮೂರನೇ ಪತ್ನಿ ಕ್ಯಾರಿ ಸೈಮಂಡ್ಸ್​ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ವರ್ಷ ಏಪ್ರಿಲ್​​ನಲ್ಲಿ ಮೊದಲ ಮಗ ವಿಲ್ಫ್ರೆಡ್​​ಗೆ ಜನ್ಮ ನೀಡಿದ್ರು. ಈಗ ಲಂಡನ್​​ನ ಆಸ್ಪತ್ರೆಯೊಂದರಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ. ಹಲವು ವರ್ಷಗಳಿಂದ ರಿಲೇಷನ್​ಶಿಪ್​​ನಲ್ಲಿದ್ದ ಇವರಿಬ್ಬರು ಕಳೆದ ವರ್ಷ ಮಗುವಾದ ಬಳಿಕ ಈ ವರ್ಷ ಮೇ ತಿಂಗಳಲ್ಲಿ ಅಧಿಕೃತವಾಗಿ ಮದುವೆಯಾಗಿದ್ರು. ಸದ್ಯ ಬೋರಿಸ್ ಜಾನ್ಸನ್​​ಗೆ 56 ವರ್ಷ.. ಕ್ಯಾರಿ ಸೈಮಂಡ್ಸ್​​ ಬೋರಿಸ್ ಜಾನ್ಸನ್​​ಗಿಂತ 23 ವರ್ಷ ಚಿಕ್ಕವರು.. ಅಂದಹಾಗೆ ಬೋರಿಸ್ ಜಾನ್ಸನ್​​ಗೆ ಈ ಹಿಂದಿನ ಹೆಂಡತಿಯರಿಂದ ಒಟ್ಟು ಐವರು ಮಕ್ಕಳಿದ್ದಾರೆ.
-masthmagaa.com

Contact Us for Advertisement

Leave a Reply