ರಷ್ಯಾ-ಯುಕ್ರೇನ್ ಸಂಘರ್ಷ: ಅಮೆರಿಕನ್ ಪತ್ರಕರ್ತ ಸಾವು!

nasthmagaa.com:

ಯುಕ್ರೇನ್-ರಷ್ಯಾ ಸಂಘರ್ಷದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಷ್ಯದ ದಾಳಿಗೆ ಅಮೆರಿಕಾ ಮೂಲದ ಪತ್ರಕರ್ತನ ಬಲಿಯಾಗಿದೆ. ಮೃತ ಪತ್ರಕರ್ತನನ್ನ 50 ವರ್ಷದ ಬ್ರೆಂಟ್​​ ರೋನಾಲ್ಡ್‌ ಅಂತ ಗುರುತಿಸಲಾಗಿದೆ. ರಾಜಧಾನಿ ಕಿಯೆವ್​​ನ ಇರ್ಪಿನ್​​​​​​ನಲ್ಲಿ ರಷ್ಯಾ ಸೇನೆಯ ಗುಂಡಿನ ದಾಳಿ ವೇಳೆ ಬ್ರೆಂಟ್​​​ ರೊನಾಲ್ಡ್​ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ. ರೋನಾಲ್ಡ್‌ “ಅಮೆರಿಕಾ ಮೂಲದ “ದಿ ನ್ಯೂಯಾರ್ಕ್‌ ಟೈಮ್ಸ್‌” ಪತ್ರಿಕೆಯ ಮಾಜಿ ವರದಿಗಾರ ಅಂತ ಹೇಳಲಾಗ್ತಾ ಇದೆ. ಫಿಲ್ಮ್‌ ಡೈರೆಕ್ಷನ್‌, ಪೋಟೋಗ್ರಾಫಿಯಲ್ಲಿ ಹೆಸರು ಮಾಡಿದ್ದ ಇವರು ಪ್ರತಿಷ್ಠಿತ ಪುರಸ್ಕಾರಗಳನ್ನ ಕೂಡ ಪಡೆದು ಕೊಂಡಿದ್ರು. ಕಾರಿನಲ್ಲಿ ಸಾಗುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡ ಪತ್ರಕರ್ತನಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಬ್ರೆಂಟ್ ರೊನಾಲ್ಡ್​ ಮೃತದೇಹವನ್ನು ಗುರುತಿಸಲಾಗಿದ್ದು, ಯುಕ್ರೇನ್ ಪೊಲೀಸರು ಕೂಡ ದೃಢಪಡಿಸಿದ್ದಾರೆ. ಅವರ ಮೃತದೇಹದ ಬಳಿ ನ್ಯೂಯಾರ್ಕ್ ಟೈಮ್ಸ್​ನ ಐಡಿ ಕಾರ್ಡ್ ಕೂಡ ಪತ್ತೆಯಾಗಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದ ಸುದ್ದಿ ಸಂಸ್ಥೆ, ಬ್ರೆಂಟ್ ರೊನಾಲ್ಡ್ ಈಗ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲ. ಹಲವು ವರ್ಷಗಳ ಹಿಂದೆ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ರು ಅಂತ ಸ್ಪಷ್ಟನೆ ನೀಡಿದೆ. ಈ ಘಟನೆ ಯುದ್ಧಕ್ಕೆ ಧುಮುಕುವಂತೆ ಅಮೆರಿಕಗೆ ಪ್ರಚೋದನೆ ನೀಡುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಮೊದಲ ಮಹಾಯುದ್ಧದಲ್ಲಿ ಲುಸಿತೇನಿಯಾ ಹಡಗನ್ನು ಜರ್ಮನಿ ಹೊಡೆದುರುಳಿಸಿದಾಗ ಅದ್ರಲ್ಲಿ 123 ಮಂದಿ ಅಮೆರಿಕನ್ ನಾಗರಿಕರು ಬಲಿಯಾಗಿದ್ರು. ಇದಾದ ಬಳಿಕ ಅಮೆರಿಕ ಯುದ್ಧಕ್ಕೆ ಧುಮುಕಿತ್ತು. 2ನೇ ಮಹಾಯುದ್ಧದಲ್ಲಿ ಅಮೆರಿಕದ ಪರ್ಲ್ ಹಾರ್ಬರ್ ಬಂದರಿನ ಮೇಲೆ ಜಪಾನ್ ದಾಳಿ ನಡೆಸಿತ್ತು.. ಇದಕ್ಕೆ ಪ್ರತಿಯಾಗಿ ಅಮೆರಿಕ 2ನೇ ಮಹಾಯುದ್ಧದಲ್ಲಿ ಭಾಗಿಯಾಗಿತ್ತು. ಈಗ ಯುಕ್ರೇನ್​ನಲ್ಲೂ ಅಮೆರಿಕನ್ ಪತ್ರಕರ್ತನ ಬಲಿಯಾಗಿದೆ. ಈಗ ಜೋ ಬೈಡೆನ್ ಸರ್ಕಾರ ಏನು ಮಾಡುತ್ತೆ ಅನ್ನೋದು ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply