ಪ್ರಧಾನಿ ಮೋದಿ, ಭಾರತ ಹೊಗಳಿದ ಯುಕ್ರೇನ್‌ ವಿದೇಶಾಂಗ ಸಚಿವ!

masthmagaa.com:

ಯುಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಪ್ರಧಾನಿ ಮೋದಿಯವ್ರನ್ನ ಹಾಡಿ ಹೊಗಳಿದ್ದಾರೆ. ಪಿಎಂ ಮೋದಿ ನಾಯಕತ್ವದಲ್ಲಿ, ಭಾರತಕ್ಕೆ ಜಾಗತಿಕ ಲೀಡರ್‌ ಆಗೋ ಶಕ್ತಿ ಬಂದಿದೆ. ಭಾರತ ಈಗ ಮಾದರಿ ರಾಷ್ಟ್ರವಾಗ್ತಿದೆ. ಜಗತ್ತು ಈಗ ಎದುರಿಸ್ತಿರೋ ಸಮಸ್ಯೆಗಳನ್ನ ಮೀರಿ, ಜಗತ್ತನ್ನ ಲೀಡ್‌ ಮಾಡೋ ನಾಯಕತ್ವದ ಅವಶ್ಯಕತೆ ಇದೆ. ಭಾರತಕ್ಕೆ ಆ ಲೀಡರ್‌ಶಿಪ್‌ ಕ್ವಾಲಿಟಿ ಬಂದಿದೆ ಅಂತ ಸಚಿವ ಕುಲೆಬಾ ಹೇಳಿದ್ದಾರೆ. ಇವ್ರು ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದು, ಶುಕ್ರವಾರ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವ್ರನ್ನ ಮೀಟ್‌ ಮಾಡಿದ್ದಾರೆ. ರಷ್ಯಾ ಯುಕ್ರೇನ್‌ ಸಮಸ್ಯೆಗೆ ಶಾಂತಿಯುತ ನಿರ್ಣಯ ಅಥ್ವಾ ರೆಸೊಲ್ಯೂಷನ್‌ ಸಿಗೋ ನಿರೀಕ್ಷೆಯಿಂದ ಕುಲೆಬಾ ಭಾರತಕ್ಕೆ ಬಂದಿದ್ದಾರೆ.

ಇನ್ನು ಮಾಸ್ಕೊ ಹತ್ಯಾಕಾಂಡ ವಿಚಾರವಾಗಿ ರಷ್ಯಾ ಅಧ್ಯಕ್ಷ ಪುಟಿನ್‌ ತೀವ್ರ ನೋವಿನಲ್ಲಿದ್ದಾರೆ ಅಂತ ಕ್ರೆಮ್ಲಿನ್‌ ಹೇಳಿದೆ. ಪುಟಿನ್‌ ಇದುವರೆಗೆ ದಾಳಿಯಲ್ಲಿ ಗಾಯಗೊಂಡೋರನ್ನ ಭೇಟಿ ಮಾಡಿಲ್ಲ. ಅಥ್ವಾ ಈ ವಿಚಾರವಾಗಿ ಹೆಚ್ಚಿಗೆ ಮಾತನಾಡಿಲ್ಲ. ಈ ಬಗ್ಗೆ ಹೇಳಿಕೆ ನೀಡಿರೋ ಕ್ರೆಮ್ಲಿನ್, ʻಪುಟಿನ್‌ ಕಣ್ಣಲ್ಲಿ ನೀರು ಬಂದಿಲ್ಲ ಅಂದ್ರೆ ಅವ್ರಿಗೆ ನೋವಾಗಿಲ್ಲ ಅಂತ ಅಲ್ಲ. ಅವರಿಗಿರೋ ನೋವನ್ನ ಯಾರು ಕೂಡ ಅರ್ಥ ಮಾಡ್ಕೊಳ್ಳಿಕ್ಕಾಗಿ, ಕಂಡುಹಿಡಿಯೋಕಾಗ್ಲಿ ಆಗಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply