ಮಾರಿಯೋಪೋಲ್​ನಲ್ಲಿ ಸ್ಥಿತಿ ಹೇಗಿದೆ? ಉಪಗ್ರಹ ಚಿತ್ರ ಹೇಳೋದೇನು?

masthmagaa.com:

ಯುಕ್ರೇನ್​ನಲ್ಲಿ ರಷ್ಯಾದ ದಾಳಿಗೆ ಸಂಬಂಧಿಸಿದಂತೆ ಅಮೆರಿಕದ ಉಪಗ್ರಹ ಸಂಸ್ಥೆ ಮಾಕ್ಸಾರ್ ಟೆಕ್ನಾಲಜೀಸ್​​​​ ಡೈಲಿ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡ್ತಿದೆ. ಅದೇ ರೀತಿ ಈಗ ಬಿಡುಗಡೆ ಮಾಡಿರೋ ಉಪಗ್ರಹ ಚಿತ್ರದಲ್ಲಿ ಮಾರಿಯೋಪೋಲ್​​ ನಗರದ ಸ್ಥಿತಿಯನ್ನು ನೋಡಬಹುದಾಗಿದೆ. ಯುಕ್ರೇನ್​​ನ ದಕ್ಷಿಣ ಭಾಗದ ಬಂದರು ನಗರದ ಈಗ ಅಕ್ಷರಶಃ ಸ್ಮಶಾನದಂತೆ ಆಗೋಗಿದೆ. ಇಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಮನೆಗಳನ್ನು ಗುರಿಯಾಗಿಸಿ ರಷ್ಯಾ ದಾಳಿ ನಡೆಸಿದೆ. ಕಟ್ಟಡಗಳು ಫುಲ್ ಧ್ವಂಸಗೊಂಡು ಹೊತ್ತಿ ಉರಿಯುತ್ತಿರೋದನ್ನು ಉಪಗ್ರಹ ಚಿತ್ರದಲ್ಲಿ ನೋಡಬಹುದಾಗಿದೆ. ಆಸ್ಪತ್ರೆಗಳು, ಇಂಡಸ್ಟ್ರಿಯಲ್ ಏರಿಯಾಗಳು ಕೂಡ ದಾಳಿಗೆ ಒಳಗಾಗಿವೆ. ಮಾರಿಯೋಪೋಲ್​ನಲ್ಲಿ ದಾಳಿ ಶುರುವಾದ ಬಳಿಕ ಈವರೆಗೆ 1582 ಜನ ಪ್ರಾಣ ಕಳ್ಕೊಂಡಿದ್ದಾರೆ ಅಂತ ಸಿಟಿ ಕೌನ್ಸಿಲ್ ಮಾಹಿತಿ ನೀಡಿದೆ. ಇನ್ನ ಮಾಕ್ಸರ್ ಸಂಸ್ಥೆ 2021ರಲ್ಲಿ ಈ ಪ್ರದೇಶಗಳು ಹೇಗಿದ್ವು ಅನ್ನೋ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದೆ. ಎರಡೂ ಪೋಟೋಗಳ ಕಂಪ್ಯಾರಿಸನ್​ನಲ್ಲಿ ಮೊದಲು ಹಚ್ಚ ಹಸಿರು ಮತ್ತು ಕಡ್ಡಟಗಳಿಂದ ಕೂಡಿದ್ದ ಪ್ರದೇಶಗಳು ಈಗ ಫುಲ್ ಹೊಗೆ, ಬೆಂಕಿ, ಕಟ್ಟಡಗಳ ಅವಶೇಷಗಳಿಂದ ಕೂಡಿರೋದು ಗೊತ್ತಾಗುತ್ತೆ.

-masthmagaa.com

Contact Us for Advertisement

Leave a Reply