ನಮ್ಮ ದೇಶಕ್ಕಾಗಿ ಹೋರಾಡಿ: ವಿದೇಶಿಯರಿಗೆ ಯುಕ್ರೇನ್ ಕರೆ

masthmagaa.com:

ವಿದೇಶದಿಂದ ಬರೋ ಸ್ವಯಂ ಸೇವಕರಿಗಾಗಿ ಯುಕ್ರೇನ್ ಅಂತಾರಾಷ್ಟ್ರೀಯ ಸೈನ್ಯವನ್ನು ಸ್ಥಾಪಿಸೋದಾಗಿ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಘೋಷಿಸಿದ್ದಾರೆ. ನಮ್ಮ ದೇಶಕ್ಕೆ ನೀವು ಸಹಾಯ ಮಾಡ್ತಿರೋದಕ್ಕೆ ಇದು ಪ್ರಮುಖ ಸಾಕ್ಷಿ ಅಂತ ಕೂಡ ತಿಳಿಸಿದ್ದಾರೆ. ಯುಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಪ್ರತಿಕ್ರಿಯಿಸಿ, ಯುಕ್ರೇನ್ ರಕ್ಷಣೆಗೆ ಸ್ವಯಂ ಸೇವಕರಾಗಿ ಬರಲು ಇಚ್ಛಿಸುವ ವಿದೇಶಿಯರು ಈ ಕೂಡಲೇ ಯುಕ್ರೇನ್​​ನ ಡಿಪ್ಲೊಮೆಟಿಕ್ ಮಿಷನ್​​ನ್ನು ಸಂಪರ್ಕಿಸಿ ಅಂತ ಹೇಳಿದ್ದಾರೆ. ಜೊತೆಗೆ ಈ ಹಿಂದೆ ಎಲ್ಲರೂ ಒಟ್ಟಾಗಿ ಹಿಟ್ಲರ್​​​​ನನ್ನು ಸೋಲಿಸಿದ್ವಿ.. ಈಗ ಪುಟಿನ್​​​​​​​​ಗೂ ಸೋಲುಣಿಸೋಣ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply