ರಷ್ಯಾದ ಜೈವಿಕ ಅಸ್ತ್ರ ಆರೋಪ ತಳ್ಳಿ ಹಾಕಿದ ವಿಶ್ವಸಂಸ್ಥೆ

masthmagaa.com:

ಅಮೆರಿಕಾ ಯುಕ್ರೇನ್‌ ನಲ್ಲಿ ಜೈವಿಕ ಅಸ್ತ್ರ ತಯಾರು ಮಾಡ್ತಿದೆ ಅನ್ನೋ ರಷ್ಯಾ ಆರೋಪವನ್ನ ವಿಶ್ವಸಂಸ್ಥೆ ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ಡಿಜಾಸ್ಟರ್‌ ಡಿಪಾರ್ಟ್ಮೆಂಟ್‌ನ ಜನರಲ್‌ ಸೆಕ್ರೆಟರಿ ಇಝುಮಿ ನಕಮಿಶು, “ಉಕ್ರೇನ್‌ ನಲ್ಲಿ ಕೇಳಿ ಬಂದಿರುವ ಜೈವಿಕ ಅಸ್ತ್ರ ಆರೋಪದ ಬಗ್ಗೆ ಯಾವುದೇ ಆತಂಕ ಪಡೋ ಅಗತ್ಯವಿಲ್ಲ ಹೇಳಿದ್ದಾರೆ. ಯುಕ್ರೇನ್ ಒಳಗೆ ಅಮೆರಿಕಾ 30 ಲ್ಯಾಬೋರೇಟರಿಗಳಲ್ಲಿ ಈ ತಯಾರಿ ನಡೆಸ್ತಿದೆ ಅಂತ ಆರೋಪಿಸಿದ್ದ ರಷ್ಯಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಕರೆದಿತ್ತು..ಇಲ್ಲಿ ರಷ್ಯಾ ವಿರುದ್ದ ತೀವ್ರ ಅಸಮಾಧಾನ ಹೊರ ಹಾಕಿರುವ ಪಾಶ್ಚೀಮಾತ್ಯ ದೇಶಗಳು “ಇದು ನಿರಾಧಾರ ಹಾಗು ಬೇಜಾವಾಬ್ದಾರಿಯುತ ಆರೋಪ ಅಂತ ರಷ್ಯಾ ವಿರುದ್ದ ಕಿಡಿಕಾರಿವೆ.. ಇನ್ನು ಸಭೆಯಲ್ಲಿ ಮಾತನಾಡಿದ ಅಮೆರಿಕಾ ಪ್ರತಿನಿಧಿ ಲಿಂಡಾ ಥಾಮಸ್‌ “, ಅಮೆರಿಕಾ ಯುಕ್ರೇನ್‌ ನಲ್ಲಿ ಕೋವಿಡ್‌ ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡಿದೆ . ಬಯೋಲಾಜಿಕಲ್‌ ವೆಪನ್‌ ಗಳ ಅಭಿವೃದ್ದಿಯನ್ನಲ್ಲ ಅಂತ ರಷ್ಯಾಗೆ ತಿರುಗೇಟು ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply