ಅಮೆರಿಕದಲ್ಲಿ ಸೈಬರ್‌ದಾಳಿ ರಷ್ಯಾ ಹೇಳಿದ್ದೇನು?

masthmagaa.com:

ಅಮೆರಿಕದ ಫ್ಲೋರಿಡಾ ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಸೆಯಾ ಮೇಲಿನ ಸೈಬರ್ ದಾಳಿಯಿಂದಾಗಿ ಜಗತ್ತಿನಾದ್ಯಂತ ಸುಮಾರು ಒಂದೂವರೆ ಸಾವಿರ ಸಂಸ್ಥೆಗಳ ಮೇಲೆ ಪ್ರಭಾವ ಬೀರಿದೆ ಅಂತ ಸಂಸ್ಥೆ ಮಾಹಿತಿ ನೀಡಿದೆ. ಇದು ಸಣ್ಣ ಸಣ್ಣ ಸಂಸ್ಥೆಗಳಿಂದ ಹಿಡಿದು ದೊಡ್ಡ ದೊಡ್ಡ ಐಟಿ ಸಂಸ್ಥೆಗಳವರೆಗೆ ಸಾಫ್ಟ್​ವೇರ್​​​​​​​​​​​ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದೆ. ಸದ್ಯ ಸೈಬರ್ ದಾಳಿ ಹೊಣೆ ಹೊತ್ತಿರೋ ಸೈಬರ್​ಕೋರರು 7 ಕೋಟಿ ಡಾಲರ್​​​​​ ಅಂದ್ರೆ ರೂಪಾಯಿ ಲೆಕ್ಕದಲ್ಲಿ ಸುಮಾರು 518 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಚೌಕಾಸಿ ಮಾಡೋಕೆ ರೆಡಿ ಅಂತ ಹೇಳಿದ್ದಾರೆ. ಆದ್ರೆ ಕಸೆಯಾ ಸಂಸ್ಥೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಇನ್ನು ಇದ್ರ ಹಿಂದೆ ರಷ್ಯಾ ಮೂಲದ ಸೈಬರ್​ಕೋರರ ಕೈ ಇದೆ ಅಂತ ಸೈಬರ್ ಸೆಕ್ಯೂರಿಟಿ ಸಂಸ್ಥೆ ಹಂಟ್ರೆಸ್​ ಲ್ಯಾಬ್ ಆರೋಪಕ್ಕೆ ರಷ್ಯಾ ಪ್ರತಿಕ್ರಿಯಿಸಿದ್ದು, ನಮಗೆ ಯಾವುದೇ ಮಾಹಿತಿ ಇಲ್ಲ.. ಅಮೆರಿಕ ಈ ಸಂಬಂಧ ನಮ್ಮನ್ನು ಸಂಪರ್ಕಿಸಿಯೂ ಇಲ್ಲ ಅಂತ ಹೇಳಿದೆ. ಅಂದಹಾಗೆ ಇತ್ತೀಚೆಗೆ ಜಿನೇವಾದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗಿದ್ರು. ಈ ವೇಳೆ ಸೈಬರ್​​ ದಾಳಿ ವಿಚಾರದಲ್ಲಿ ಪರಸ್ಪರ ಸಹಕಾರ ನೀಡಲು ಒಪ್ಪಿಕೊಂಡಿದ್ರು.

-masthmagaa.com

Contact Us for Advertisement

Leave a Reply