ಕಪ್ಪು ಸಮುದ್ರ ವಲಯದಲ್ಲಿ ಲಾಯ್ಡ್ ಆಸ್ಟಿನ್ ಪ್ರವಾಸ!

masthmagaa.com:

ಅಮೆರಿಕದ ಡಿಫೆನ್ಸ್​ ಸೆಕ್ರೆಟರಿ ಲಾಯ್ಡ್ ಆಸ್ಟಿನ್ ಕಪ್ಪು ಸಮುದ್ರ ವಲಯಕ್ಕೆ ಪ್ರವಾಸ ಕೈಗೊಂಡಿದ್ದಾರೆ. ರಷ್ಯಾದಿಂದ ಒತ್ತಡಕ್ಕೆ ಒಳಗಾದ ದೇಶಗಳ ಜೊತೆ ಮೈತ್ರಿ ಸೇರಿದಂತೆ ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾರ್ಯಾಚರಣೆಗೆ ಸಹಾಯ ಮಾಡಿದ ಮಿತ್ರರಿಗೆ ಧನ್ಯವಾದ ತಿಳಿಸಲಿದ್ದಾರೆ. ಜಾರ್ಜಿಯಾ, ರೊಮೇನಿಯಾ, ಯುಕ್ರೇನ್​ಗೂ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂರು ದೇಶಗಳು ನ್ಯಾಟೋ ಒಕ್ಕೂಟದ ಭಾಗವೇ ಆಗಿವೆ. ರೊಮೇನಿಯಾ ಫುಲ್ ಮೆಂಬರ್ ಆಗಿದ್ರೆ, ಜಾರ್ಜಿಯಾ ಮತ್ತು ಯುಕ್ರೇನ್ ಸದ್ಯ ಪಾಲುದಾರ ದೇಶಗಳಾಗಿವೆ. ಈ ದೇಶಗಳಿಗೆ ಪ್ರವಾಸ ಕೈಗೊಂಡ ಬಳಿಕ ಅಕ್ಟೋಬರ್ 20-21ರಂದು ಬ್ರಸೆಲ್ಸ್​ನಲ್ಲಿ ನಡೆಯಲಿರೋ ನ್ಯಾಟೋ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply