ಪರಮಾಣು ಸ್ಫೋಟಕಗಳ ಲೆಕ್ಕ ಕೊಟ್ಟ ಅಮೆರಿಕ! ಎಷ್ಟು ಸ್ಫೋಟಕ ಇದೆ ಗೊತ್ತಾ..?

masthmagaa.com:

ಅಮೆರಿಕದ ಸ್ಟೇಟ್​ ಡಿಪಾರ್ಟ್​​ಮೆಂಟ್​​ 4 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹದ ಬಗ್ಗೆ ದಾಖಲೆ ಬಿಡುಗಡೆ ಮಾಡಿದೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಈ ದಾಖಲೆಗಳನ್ನು ಬಿಡುಗಡೆ ಮಾಡದಂತೆ ತಡೆಯೊಡ್ಡಿದ್ರು. ಆದ್ರೀಗ ಬೈಡೆನ್ ಆಡಳಿತದ ಗ್ರೀನ್ ಸಿಗ್ನಲ್​​ನೊಂದಿಗೆ ಸ್ಟೇಟ್ ಡಿಪಾರ್ಟ್​ಮೆಂಟ್ ದಾಖಲೆ ಬಿಡುಗಡೆ ಮಾಡಿದೆ. ಅದ್ರ ಪ್ರಕಾರ 2020ರ ಸೆಪ್ಟೆಂಬರ್​ವರೆಗೆ ಅಮೆರಿಕದ ಸೇನೆ ಬಳಿ 3,750 ಸಕ್ರಿಯ ಮತ್ತು ನಿಷ್ಕ್ರಿಯ ಪರಮಾಣು ಸಿಡಿತಲೆಗಳಿವೆ. 2019ಕ್ಕೆ ಹೋಲಿಸಿದ್ರೆ ಇವುಗಳ ಸಂಖ್ಯೆ 55 ಕಡಿಮೆಯಾಗಿದೆ. ಅದೇ 2017ಕ್ಕೆ ಹೋಲಿಸಿದ್ರೆ ಇವುಗಳ ಸಂಖ್ಯೆಯಲ್ಲಿ 72 ಕಡಿಮೆಯಾಗಿದೆ ಅಂತ ಸ್ಟೇಟ್ ಡಿಪಾರ್ಟ್​​ಮೆಂಟ್ ತಿಳಿಸಿದೆ. ರಷ್ಯಾದ ಜೊತೆ ಶೀತಲ ಸಮರದ ವೇಳೆ ಅಂದ್ರೆ 1967ರಲ್ಲಿ ಅಮೆರಿಕ ಈ ಪರಮಾಣು ಸಿಡಿತಲೆಗಳ ಸಂಖ್ಯೆ 31,255ರಷ್ಟಿತ್ತು. ಅದಾದ ಬಳಿಕ ಸಿಡಿತಲೆಗಳ ಪ್ರಮಾಣ ಈಮಟ್ಟಿಗೆ ಕಡಿಮೆಯಾಗಿರೋದು ಅಂದ್ರೆ 3,750ಕ್ಕೆ ಇಳಿದಿರೋದು ಇದೇ ಮೊದಲು. ಟ್ರಂಪ್ ಅವಧಿಯಲ್ಲಿ ರಷ್ಯಾ ಜೊತೆಗಿನ ಶಸ್ತ್ರಾಸ್ತ್ರ ಸಂಗ್ರಹ ನಿಯಂತ್ರಣ ಸಂಬಂಧ ಮಾತುಕತೆಯೇ ಸ್ಥಗಿತಗೊಂಡಿತ್ತು. ಆದ್ರೀಗ ಅದನ್ನು ಮತ್ತೆ ಶುರು ಮಾಡೋ ದೃಷ್ಟಿಯಿಂದ ಅಮೆರಿಕದ ಬೈಡೆನ್ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಅಂದಹಾಗೆ ಬೈಡೆನ್ ಅಧಿಕಾರಕ್ಕೆ ಬರ್ತಿದ್ದಂತೆ ರಷ್ಯಾ ಜೊತೆಗಿನ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದ ನ್ಯೂ ಸ್ಟಾರ್ಟ್​​​ನ್ನು ಮತ್ತೊಂದು ಅವಧಿಗೆ ಅಂದ್ರೆ 5 ವರ್ಷಕ್ಕೆ ವಿಸ್ತರಿಸಿದ್ರು. ಈ ಒಪ್ಪಂದ ಪ್ರಕಾರ ಅಮೆರಿಕ ಮತ್ತು ರಷ್ಯಾ 1,550ಕ್ಕಿಂತ ಹೆಚ್ಚು ಪರಮಾಣು ಸಿಡಿತಲೆಗಳನ್ನು ಸಂಗ್ರಹಿಸುವಂತಿಲ್ಲ.

-masthmagaa.com

Contact Us for Advertisement

Leave a Reply