ಭಾರತ-ಪಾಕ್‌ನ ದ್ವಿಪಕ್ಷೀಯ ಸಂಬಂಧ ಸರಿಯಾಗಲಿ: ಅಮೆರಿಕ!

masthmagaa.com:

ಭಾರತ-ಪಾಕ್‌ ನಡುವಿನ ಸಂಬಂಧದ ಬಗ್ಗೆ ಅಮೆರಿಕ ಮಾತಾಡಿದೆ. ಭಾರತ ಮತ್ತು ಪಾಕಿಸ್ತಾನಗಳೆರಡು ತಮ್ಮ ದ್ವಿಪಕ್ಷೀಯ ಸಂಬಂಧವನ್ನ ಸರಿಪಡಿಸಿಕೊಳ್ಬೇಕು ಅಂತ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್‌‌ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಹೇಳಿದ್ದಾರೆ. ಪಾಕ್‌ ನೂತನ ಪ್ರಧಾನಿ ಶಹಬಾಜ್‌ ಷರೀಫ್‌ ಅವ್ರಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡೊವಾಗ ಮಿಲ್ಲರ್‌ ಈ ರೀತಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಉಭಯ ದೇಶಗಳ ಮಧ್ಯೆ ಶಾಂತಿಯುತ ಮಾತುಕತೆ ಆಗ್ಬೇಕು. ಆದ್ರೆ ಉಭಯ ದೇಶಗಳ ನಡುವಿನ ಮಾತುಕತೆಯ ಸಾರಾಂಶವನ್ನ ಅವ್ರವ್ರೆ ಡಿಸೈಡ್‌ ಮಾಡ್ಕೊಬೇಕು ಅಂತ ಮಿಲ್ಲರ್‌ ಹೇಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply