ಸೂಪರ್ ಸೈನಿಕರನ್ನು ನಿರ್ಮಿಸಲು ಚೀನಾ ಹೊಸ ಪ್ರಯೋಗ..!

masthmagaa.com:

ಅಮೆರಿಕ: ಇಷ್ಟು ದಿನ ಕೊರೋನಾ ಬಂದಿದ್ದು ಚೀನಾದಿಂದಲೇ ಅಂತ ಇಡೀ ಜಗತ್ತು ಬೊಟ್ಟು ಮಾಡಿ ತೋರಿಸ್ತಾ ಇತ್ತು. ಈಗ ಅದೇ ಚೀನಾ ಹೊಸ ಪ್ರಯೋಗವೊಂದಕ್ಕೆ ಮುಂದಾಗಿದೆ. ಅದು ಸಾಮಾನ್ಯ ಪ್ರಯೋಗ ಅಲ್ಲ.. ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿಯ ಸೈನಿಕರನ್ನು ಸೂಪರ್ ಸೊಲ್ಜರ್​​ಗಳನ್ನಾಗಿ ಮಾಡುವ ಪ್ರಯೋಗ.. ಅಂದ್ರೆ ಜೈವಿಕವಾಗಿಯೇ ಯೋಧರು ವಿಶೇಷ ಶಕ್ತಿಯನ್ನು ಹೊಂದುವಂತೆ ಮಾಡೋದು. ಇದಕ್ಕಾಗಿ ಚೀನಾ ಯೋಧರನ್ನು ವಿವಿಧ ಪರೀಕ್ಷೆಗೆ ಒಳಪಡಿಸ್ತಿದೆ ಅಂತ ಅಮೆರಿಕದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ ಜಾನ್ ರಾಟ್​​ಕ್ಲಿಫ್ಫಿ  ಮಾಹಿತಿ ನೀಡಿದ್ಧಾರೆ.

ಅಮೆರಿಕ ಮತ್ತು ಉಳಿದೆಲ್ಲಾ ದೇಶಗಳಿಗಿಂತ ಆರ್ಥಿಕವಾಗಿ, ಮಿಲಿಟರಿ ಮತ್ತು ತಾಂತ್ರಿಕವಾಗಿ ಮುಂದೆ ಇರಬೇಕೆನ್ನುವ ಉದ್ದೇಶದಿಂದ ಚೀನಾ ಇಷ್ಟೆಲ್ಲಾ ಮಾಡುತ್ತಿದೆ. 2ನೇ ಮಹಾಯುದ್ಧದ ಬಳಿಕ ಇದೀಗ ಚೀನಾ ಅಮೆರಿಕಗೆ, ಪ್ರಜಾಪ್ರಭುತ್ವಕ್ಕೆ ಮತ್ತು ಪ್ರಪಂಚದ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯವಾಗಿದೆ ಅಂತ ವಾಲ್​ ಸ್ಟ್ರೀಟ್ ಜರ್ನಲ್​​ನಲ್ಲಿ ತಾವು ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ಜೊತೆಗೆ ಚೀನಾ ಅಮೆರಿಕದ ಕಂಪನಿಗಳ ಗುಪ್ತ ಅಂಶಗಳನ್ನು ಕದ್ದು, ತಂತ್ರಜ್ಞಾನವನ್ನು ನಕಲು ಮಾಡಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಕಂಪನಿಗಳ ಜಾಗವನ್ನು ಅತಿಕ್ರಮಿಸಿಕೊಳ್ಳುತ್ತಿದೆ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಅಮೆರಿಕ ತನ್ನ ಬಜೆಟ್​​ನಲ್ಲಿ ಗುಪ್ತಚರ ಇಲಾಖೆಗೆ ಹೆಚ್ಚಿನ ಹಣ ಮೀಸಲಿಡಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply