ಅಮೆರಿಕದ ಸಬ್​​ಮರೀನ್​​ಗೆ ಚೀನಾ ಬಳಿ ಡ್ಯಾಮೇಜ್!

masthmagaa.com:

ದಕ್ಷಿಣ ಚೀನಾ ಸಾಗರದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ಪರಮಾಣು ಸಬ್​ಮರೀನ್​​ಗೆ ಯಾವುದೋ ವಸ್ತುವೊಂದು ಡಿಕ್ಕಿಯಾಗಿದೆ. ಕಳೆದ ಶನಿವಾರ ಅಂದ್ರೆ ಅಕ್ಟೋಬರ್ 2ರಂದೇ ಈ ಘಟನೆ ಸಂಭವಿಸಿದ್ದು, ಸಬ್​ಮರೀನ್ USS ಕನೆಕ್ಟಿಕಟ್​​​​ಗೆ ಡ್ಯಾಮೇಜ್ ಆಗಿದೆ. ಸಮುದ್ರದಾಳದಲ್ಲಿ ಕಾರ್ಯಾಚರಣೆ ವೇಳೆ ಈ ಘಟನೆಯಾಗಿದೆ. ಸಬ್​ಮರೀನ್​ನಲ್ಲಿದ್ದ 15 ಮಂದಿ ನಾವಿಕರಿಗೆ ಗಾಯಗಳಾಗಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಮಾರಣಾಂತಿಕ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಳಗಳಷ್ಟೆ ಅಂತ ಅಮೆರಿಕದ ನೌಕಾಪಡೆ ತಿಳಿಸಿದೆ. ಆದ್ರೆ ಯಾವ ವಸ್ತುವಿಗೆ ಡಿಕ್ಕಿಯಾಗಿದೆ ಅನ್ನೋ ವಿಚಾರ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಸಬ್​ಮರೀನ್ ಕೂಡ ಸುರಕ್ಷಿತವಾಗಿದ್ದು, ಸ್ಥಿರವಾಗಿದೆ. ನಾರ್ಮಲ್ ಆಗಿ ಕೆಲಸ ಮಾಡ್ತಿದೆ. ಇದ್ರ ಪರಮಾಣು ವಿಭಾಗಕ್ಕೂ ಏನೂ ಹಾನಿಯಾಗಿಲ್ಲ ಅಂತ ನೌಕಾಪಡೆ ತಿಳಿಸಿದೆ. ಸದ್ಯ ಈ ಸಬ್​ಮರೀನ್ ಪಶ್ಚಿಮ ಪೆಸಿಫಿಕ್ ಸಮುದ್ರಲ್ಲಿರೋ ಅಮೆರಿಕಗೆ ಸೇರಿದ ಗುವಾಮ್​​ ದ್ವೀಪದ ಕಡೆಗೆ ಹೊರಟಿದೆ.

ಈ ನಡುವೆ ಚೀನಾದ ವಿರೋಧದ ನಡುವೆಯೂ ಫ್ರಾನ್ಸ್​​ನ ಸೆನೆಟರ್​ಗಳ ನಿಯೋಗವೊಂದು ತೈವಾನ್​ಗೆ ಹೋಗಿದೆ. ಫ್ರಾನ್ಸ್​ನ ಮಾಜಿ ರಕ್ಷಣಾ ಸಚಿವರೂ ಆಗಿರೋ ಅಲೈನ್ ರಿಚರ್ಡ್ ಈ ನಿಯೋಗದ ನೇತೃತ್ವ ವಹಿಸಿದ್ದಾರೆ. ಐದು ದಿನಗಳ ಪ್ರವಾಸ ಇದಾಗಿದೆ. ಈ ವೇಳೆ ಅಲೈನ್ ರಿಚರ್ಡ್​​​ ತೈವಾನ್​ನ್ನು ಸ್ವತಂತ್ರ ದೇಶ ಅಂತ ಕರೆದಿದ್ದಾರೆ. ಈ ಪ್ರವಾಸಕ್ಕೆ ಫ್ರಾನ್ಸ್​ನಲ್ಲಿರೋ ಚೀನಾ ರಾಯಭಾರಿ ಕಚೇರಿ ಕಡೆಯಿಂದ ವಿರೋಧ ವ್ಯಕ್ತಪಡಿಸಲಾಗಿತ್ತು. ಈ ಪ್ರವಾಸ ಚೀನಾದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದ್ರಿಂದ ಚೀನಾ-ಫ್ರಾನ್ಸ್ ಸಂಬಂಧಕ್ಕೂ ಧಕ್ಕೆಯುಂಟು ಮಾಡಲಿದೆ ಅಂತ ಎಚ್ಚರಿಸಿತ್ತು.

-masthmagaa.com

Contact Us for Advertisement

Leave a Reply