ವುಹಾನ್​ ಲ್ಯಾಬ್-ಕೊರೋನಾ ಲಿಂಕ್​​​ಗೆ ಸಾಕ್ಷ್ಯ ಸಿಕ್ಕಿದೆ : ಟ್ರಂಪ್ ಕೆಂಡ

masthmagaa.com:

ಕೊರೋನಾ ವೈರಸ್ ವಿಚಾರವಾಗಿ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಾಗ್ದಾಳಿ ಮುಂದುವರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆಯಾಗಬೇಕು.. ಅದು ಚೀನಾದ ಪಿಆರ್ ಏಜೆನ್ಸಿ ಅಂದ್ರೆ ಪಬ್ಲಿಕ್ ರಿಲೇಷನ್ ಏಜೆನ್ಸಿ ರೀತಿ ಕೆಲಸ ಮಾಡುತ್ತಿದೆ ಅಂತ ಕಿಡಿಕಾರಿದ್ರು. ಜೊತೆಗೆ ಚೀನಾದ ಮೇಲೆ ಹೊಸ ಸುಂಕ ವಿಧಿಸುವ ಎಚ್ಚರಿಕೆ ನೀಡಿದ ಟ್ರಂಪ್, ಕೊರೋನಾ ವೈರಸ್ ಚೀನಾದ ವುಹಾನ್​​​​ ಲ್ಯಾಬ್ ಜೊತೆ ನೇರ ಸಂಬಂಧ ಹೊಂದಿರೋದಕ್ಕೆ ಸಾಕ್ಷ್ಯಗಳು ಸಿಕ್ಕಿವೆ ಎಂದಿದ್ದಾರೆ. ಯಾವ ಸಾಕ್ಷಿ ಸಿಕ್ಕಿದೆ ಅಂತ ಪತ್ರಕರ್ತರು ಮರುಪ್ರಶ್ನೆ ಹಾಕಿದಾಗ, ನಾನು ಅದನ್ನು ಹೇಳಲು ಸಾಧ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ.

ಅಮೆರಿಕದಲ್ಲಿ ಈವರೆಗೆ 10,69,424 ಮಂದಿಗೆ ಸೋಂಕು ತಗುಲಿದ್ದು, 62,996 ಮಂದಿ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply