ರೆಡಿಯಾಯ್ತು ರಷ್ಯಾದ ಎಸ್​​-400! ಮುಂದೇನು?

masthmagaa.com:

ಯುಕ್ರೇನ್ ಮೇಲೆ ರಷ್ಯಾ ಮುಗಿಬಿದ್ದು ಈಗಾಗಲೇ ಒಂದು ವಾರ ಕಳೆದೋಗಿದೆ. ಸಂಘರ್ಷ 8ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಇಲ್ಲಿ ರಷ್ಯಾ ಅಂದುಕೊಂಡಿದ್ದರ ಮಟ್ಟಿಗೆ ಯಶಸ್ಸು ಸಿಗ್ತಾ ಇಲ್ಲ. ಯುಕ್ರೇನ್ ಕಡೆಯಿಂದ ಬಲವಾದ ವಿರೋಧ ಎದುರಾಗ್ತಿದೆ. ಮತ್ತೊಂದ್ಕಡೆ ಪಾಶ್ಚಿಮಾತ್ಯ ದೇಶಗಳು ಯುಕ್ರೇನ್​​ಗೆ ನಿರಂತರವಾಗಿ ಸಪೋರ್ಟ್ ಮಾಡ್ತಾ ಇದಾರೆ. ಇದ್ರ ನಡುವೆಯೇ ಭಾನುವಾರ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ರೆಡಿ ಇಟ್ಕೊಳ್ಳಿ ಅಂತ ಆದೇಶಿಸಿದ್ರು. ಇದೀಗ ಕಂಟ್ರೋಲ್​​ಗೆ ಬಾರದ ಯುಕ್ರೇನ್​ ಮೇಲೆ ಎಸ್​​ 400 ಕ್ಷಿಪಣಿ ವ್ಯವಸ್ಥೆಯನ್ನು ಬಳಸೋ ಸುಳಿವು ಕೊಡ್ತಿದೆ ರಷ್ಯಾ.. ಯೆಸ್..ರಷ್ಯಾದ ನಗರಗಳಲ್ಲಿ ಎಸ್​-400 ಕ್ಷಿಪಣಿ ವ್ಯವಸ್ಥೆಯ ವಾಹನಗಳು ಓಡಾಡಿರೋ ಬಗ್ಗೆ ವರದಿಯಾಗಿದ್ದು, ಸಮರಾಭ್ಯಾಸ ಕೂಡ ಶುರುವಾಗಿದೆ. ಆದ್ರೆ ಈಗ ಬಂದಿರೋ ಮಾಹಿತಿ ಪ್ರಕಾರ ನೊವೊರ್​ಸಿಬಿರ್ಸ್ಕ್​​ನಲ್ಲಿ ಈ ಸಮರಾಭ್ಯಾಸ ನಡೀತಾ ಇದೆ. ಇದು ಯುಕ್ರೇನ್​ನಿಂದ ತುಂಬಾ ದೂರ ಇದೆ. ರಷ್ಯಾದ ಮಧ್ಯಭಾಗದಲ್ಲಿ ಕಜಕ್​ಸ್ಥಾನದ ಗಡಿಭಾಗದಲ್ಲಿ ಈ ಪ್ರದೇಶ ಬರುತ್ತೆ. ಇಲ್ಲಿ ದೊಡ್ಡಮಟ್ಟದಲ್ಲಿ ಸಮರಾಭ್ಯಾಸ ನಡೀತಿರೋ ಮಾಹಿತಿ ಸಿಕ್ಕಿದೆ. ಎಸ್​-400 ರಷ್ಯಾದ ಶಕ್ತಿಶಾಲಿ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದು ನೆಲದ ಮೇಲಿಂದ ದೊಡ್ಡಮಟ್ಟದಲ್ಲಿ ದಾಳಿ ನಡೆಸಬಲ್ಲ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಫೈಟರ್ ಜೆಟ್, ಬಾಂಬರ್ಸ್, ವಿವಿಧ ಕ್ಷಿಪಣಿಗಳು, ಮಾನವ ರಹಿತ ಏರ್​ಕ್ರಾಫ್ಟ್​​ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಇದ್ರಲ್ಲಿ 4 ಬಗೆಯ ಮಿಸೈಲ್​ಗಳಿವೆ.. ಇವು 400 ಕಿಲೋಮೀಟರ್​ವರೆಗೆ ಸಾಗಿ ದಾಳಿ ನಡೆಸೋ ಸಾಮರ್ಥ್ಯ ಹೊಂದಿರುತ್ತವೆ.

-masthmagaa.com

Contact Us for Advertisement

Leave a Reply