ಭಾರತದ ನೆರವಿಗೆ ನಿಂತ ಅಮೆರಿಕ.. ಭಾರತೀಯ ವಿಜ್ಞಾನಿಗಳ ಬಗ್ಗೆ ಹೊಗಳಿಕೆ..!

masthmagaa.com:

ಕೊರೋನಾ ಆರ್ಭಟಕ್ಕೆ ನಲುಗಿರೋ ಅಮೆರಿಕದಲ್ಲಿ 14 ಲಕ್ಷ ಜನರಿಗೆ ಸೋಂಕು ತಗುಲಿದ್ದು, 85 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಅಮೆರಿಕ ಈಗ ಭಾರತದ ನೆರವಿಗೆ ನಿಂತಿದ್ದು, ವೆಂಟಿಲೇಟರ್​ಗಳನ್ನ ದಾನ ಮಾಡುವುದಾಗಿ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಅಮೆರಿಕವು ವೆಂಟಿಲೇಟರ್‌ಗಳನ್ನ ದಾನ ನೀಡಲಿದೆ. ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತ ಮತ್ತು ಪ್ರಧಾನಿ ಮೋದಿ ಜೊತೆ ನಾವು ನಿಲ್ಲುತ್ತೇವೆ. ಲಸಿಕೆ ಅಭಿವೃದ್ಧಿಗೆ ನಾವು ಸಹಕರಿಸುತ್ತಿದ್ದೇವೆ. ಅಮೆರಿಕ-ಭಾರತ ಒಟ್ಟಾಗಿ ಅದೃಶ್ಯ ಶತ್ರುವನ್ನ ಸೋಲಿಸುತ್ತೇವೆ ಅಂತ ಬರೆದುಕೊಂಡಿದ್ದಾರೆ.

ಬಳಿಕ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಭಾರತ ಒಂದು ಅದ್ಭುತ ದೇಶ. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ಅಮೆರಿಕದಲ್ಲಿ ಸಾಕಷ್ಟು ಭಾರತೀಯರಿದ್ದಾರೆ. ಅದರಲ್ಲಿ ಕೆಲ ಶ್ರೇಷ್ಠ ವಿಜ್ಞಾನಿಗಳು ಹಾಗೂ ಸಂಶೋಧಕರು ಲಸಿಕೆ ಕಂಡು ಹಿಡಿಯುತ್ತಿದ್ದಾರೆ ಅಂತ ಹೇಳಿದ್ರು.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಪಾತ್ರದ ಬಗ್ಗೆ ಮಾತನಾಡುವಾಗ ಟ್ರಂಪ್ ಈ ರೀತಿ ಹೇಳಿದ್ದಾರೆ. ಭಾರತೀಯ ಸಮುದಾಯದ ವೈಜ್ಞಾನಿಕ ಮತ್ತು ಸಂಶೋಧನಾ ಪ್ರತಿಭೆಯನ್ನ ಅಮೆರಿಕ ಅಧ್ಯಕ್ಷರು ಗುರುತಿಸಿದ್ದು ಇದೇ ಮೊದಲು ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply