ವಿಯೆಟ್ನಾಂ ಅಮೆರಿಕ ರಾಯಭಾರಿ ಕಚೇರಿ ಸಿಬ್ಬಂದಿಗೆ ಹವಾನಾ ಸಿಂಡ್ರೋಮ್!

masthmagaa.com:

ಏಷ್ಯಾ ಪ್ರವಾಸದಲ್ಲಿರೋ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ವಿಯೆಟ್ನಾಂಗೆ 3 ಗಂಟೆ ಲೇಟ್ ಆಗಿ ಲ್ಯಾಂಡ್ ಆಗಿದ್ದಾರೆ. ಭಾನುವಾರ ಸಿಂಗಾಪುರ್​ಗೆ ಬಂದಿದ್ದ ಕಮಲಾ ಹ್ಯಾರಿಸ್​​, ಈಗ ವಿಯೆಟ್ನಾಂಗೆ ಬಂದಿದ್ದಾರೆ. ಇವರ ವಿಳಂಬಕ್ಕೆ ವಿಯಟ್ನಾಂ ರಾಯಭಾರಿ ಕಚೇರಿ ಸಿಬ್ಬಂದಿ ಹವಾನಾ ಸಿಂಡ್ರೋಮ್​​ಗೆ ತುತ್ತಾಗಿರೋದು ಕಾರಣ ಅಂತ ಗೊತ್ತಾಗಿದೆ. ಹವಾನಾ ಸಿಂಡ್ರೋಮ್ ಅನ್ನೋದು ಒಂದು ಮಾನಸಿಕ ಕಾಯಿಲೆ. ಮೊದಲಿಗೆ 2016ರಲ್ಲಿ ಕ್ಯೂಬಾ ರಾಜಧಾನಿ ಹವಾನಾದಲ್ಲಿರೋ ಬೇರೆ ಬೇರೆ ದೇಶಗಳ ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿಗೆ ಮಾನಸಿಕ ಸಮಸ್ಯೆ ಎದುರಾಯ್ತು. ಇದನ್ನು ಹವಾನಾ ಸಿಂಡ್ರೋಮ್ ಅಂತ ಕರೆಯಲಾಗಿತ್ತು. ಆಗ ಇದೆಲ್ಲವೂ ಕ್ಯೂಬಾ ಕುತಂತ್ರ.. ಸರ್ಕಾರವೇ ಬೇಕಂತ ಹೀಗೆ ಮಾಡ್ತಿದೆ ಅಂತ ಡೊನಾಲ್ಡ್ ಟ್ರಂಪ್ ಆರೋಪಿಸಿದ್ರು. ವಿಚಿತ್ರ ಶಬ್ದಗಳು ಕೇಳಿದಂತೆ ಆಗೋದು, ತಲೆನೋವು, ಕಿವಿಯಲ್ಲಿ ಸಮಸ್ಯೆ, ನೆನಪಿನ ಶಕ್ತಿ ಹೋಗೋದು, ವಾಕರಿಕೆ ಬರೋದು ಇದರ ಪ್ರಮುಖ ಲಕ್ಷಣವಾಗಿದೆ.

-masthmagaa.com

Contact Us for Advertisement

Leave a Reply