ಕೊರೋನ ಲಸಿಕೆ: ಜೋ ಬೈಡೆನ್ ದೊಡ್ಡ ನಿರ್ಧಾರ

masthmagaa.com:

ಅಮೆರಿಕ ತನ್ನ Defense Production Act of 1950 ನಿರ್ಬಂಧಗಳನ್ನ ಮೂರು ಲಸಿಕೆಗಳ ಮೇಲಿಂದ ರಿಮೂವ್ ಮಾಡಿದೆ. ತೆಗೆದು ಹಾಕಿದೆ. ಆಸ್ಟ್ರಾಜೆನೆಕಾ, ನೋವಾವ್ಯಾಕ್ಸ್ ಹಾಗೂ ಸನೋಫಿ ವ್ಯಾಕ್ಸಿನ್ ಗಳನ್ನ ಈ ಕಾಯ್ದೆಯ ಕಂಟ್ರೋಲ್ ನಿಂದ ಹೊರಗಿಡಲು ನಿರ್ಧಾರ ಮಾಡಲಾಗಿದೆ. ಇದರ ಪರಿಣಾಮ ಈ ಕಂಪನಿಗಳು ತಾವು ತಯಾರಿಸಿದ ಲಸಿಕೆ ಡೋಸ್ ಗಳನ್ನ ಅಮೆರಿಕದ ಹೊರಗೆ ವಿದೇಶಗಳಿಗೆ ತಮಗಿಷ್ಟ ಬಂದ ಟೈಮಿಗೆ ಮಾರಲು ಅವಕಾಶ ಸಿಗುತ್ತೆ. ಇದರಿಂದ ವಿಶ್ವದ ಲಸಿಕೆ ಕೊರತೆ ನೀಗಿಸಲು ಸಹಾಯ ಆಗುತ್ತೆ ಅಂತ ಅಂದಾಜಿಸಲಾಗಿದೆ. ಜೂನ್ ವೇಳೆಗೆ ಜೋ ಬೈಡೆನ್ 8 ಕೋಟಿ ಅಮೆರಿಕನ್ ಮೇಡ್ ಲಸಿಕೆಗಳನ್ನ ಸಂಕಷ್ಟದಲ್ಲಿರೋ ದೇಶಗಳಿಗೆ ಕೊಡೋದಾಗಿ ಹೇಳಿದ್ದಾರೆ. ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅಮೆರಿಕದಲ್ಲಿ ಫೈಝರ್, ಮಾಡೆರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳನ್ನ ಹಾಕಿ ವೇಗವಾಗಿ ಅಭಿಯಾನ ಮಾಡ್ತಿದ್ದಾರೆ. ಜನಸಂಖ್ಯೆಯ ದೊಡ್ಡ ಭಾಗವನ್ನ ಕವರ್ ಮಾಡಿ ಆಗಿದೆ ಅಲ್ಲಿ. ಹೀಗಾಗಿ ಫುಲ್ ಆತ್ಮವಿಶ್ವಾಸ ದಿಂದ ಈ Defense Production Act ಅನ್ನ ತೆಗೆದು ಹಾಕಿದ್ದಾರೆ. ಆದರೆ, ಅಮೆರಿಕದಲ್ಲಿ ಈಗ ಯಾವ ಲಸಿಕೆ ಬಳಸ್ತಿಲ್ವೋ ಆ ಲಸಿಕೆಗಳಿಗೆ ಮಾತ್ರ ನಿರ್ಬಂಧ ತೆಗೆದಿದ್ದಾರೆ. ಆದ್ರೂ ಭಾರತ ಸೇರಿ ಹಲವು ದೇಶಗಳಲ್ಲಿ ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಹಾಕ್ತಿರೋದ್ರಿಂದ ಈ ಲಸಿಕೆ ಬಂದ್ರೆ ಹೆಲ್ಪ್ ಆಗುತ್ತೆ.
ಅಂದಹಾಗೆ ಅಮೆರಿಕದ ರಕ್ಷಣೆಗೆ ಬೇಕಾಗೋ ಸರಕು-ಸಾಮಗ್ರಿಗಳನ್ನ ಮೊದಲು ಅಮೆರಿಕಕ್ಕೇ ಸಿಗೋ ಹಾಗೆ ಮಾಡಲು 1950ರ ಕೊರಿಯುನ್ ಯುದ್ಧ ವೇಳೆ ಈ Defense Production Act ಅನ್ನ ಜಾರಿಗೆ ತರಲಾಗಿತ್ತು.

-masthmagaa.com

Contact Us for Advertisement

Leave a Reply