ಭಾರತ ವಿದೇಶದಲ್ಲಿರೋ ಧಾರ್ಮಿಕ ಅಲ್ಪಸಂಖ್ಯಾತರನ್ನ ಟಾರ್ಗೆಟ್‌ ಮಾಡ್ತಿದೆ

masthmagaa.com:

ಪನ್ನುನ್‌ ಹತ್ಯೆ ಪ್ರಯತ್ನ ವಿವಾದದಿಂದ ಭಾರತ ಅಮೆರಿಕಗಳ ಸಂಬಂಧ ಹಳ್ಳ ಹಿಡಿದಿರೋ ಈ ಟೈಮಲ್ಲಿ ಅಮೆರಿಕದ ಸಂಸ್ಥೆಯೊಂದು ಭಾರತದ ಮೇಲೆ ಇನ್ನೊಂದು ಅಪವಾದ ಹೊರಿಸಿದೆ. ಭಾರತ ವಿದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನ ಟಾರ್ಗೆಟ್‌ ಮಾಡ್ತಿದೆ. ಹಾಗಾಗಿ ಭಾರತವನ್ನ “country of particular concern” ಅಂತ ಗೊತ್ತುಪಡಿಸಿ. ಅಂದ್ರೆ ಭಾರತದ ಧಾರ್ಮಿಕ ನೀತಿಗಳ ಮೇಲೆ ಕಣ್ಣಿಡಿ ಅಂತ ಸಂಸ್ಥೆಯೊಂದು ಅಮೆರಿಕದ ಬೈಡೆನ್‌ ಸರ್ಕಾರಕ್ಕೆ ಕರೆ ಕೊಟ್ಟಿದೆ. ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ (USCIRRF) ಬೈಡೆನ್‌ ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಿದೆ. ಭಾರತ ಸರ್ಕಾರ ವಿದೇಶಿ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಲಾಯರ್‌ಗಳನ್ನ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡದಂತೆ ತಡೆಯೋಕೆ ಪ್ರಯತ್ನ ಪಡ್ತಿದೆ. ಹಾಗಾಗಿ ಅಮೆರಿಕ ಭಾರತದ ವಿರುದ್ಧ ಕ್ರಮ ತಗೊಳ್ಬೇಕು ಅಂತ ಈ ಸಂಸ್ಥೆ ಹೇಳಿದೆ. ಈ ಬಗ್ಗೆ ಅಮೆರಿಕದಲ್ಲಿರೋ ಭಾರತದ ರಾಯಭಾರಿ ಕಚೇರಿಯಾಗ್ಲೀ, ಭಾರತವಾಗ್ಲಿ ಸಧ್ಯಕ್ಕೆ ರಿಯಾಕ್ಟ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply