ವಿಶ್ವದಲ್ಲಿ 30 ಕೋಟಿ ದಾಟಿದ ಕೊರೋನಾ!

masthmagaa.com:

ಅಮೆರಿಕದಲ್ಲಿ ಕೊರೋನಾ ಹಾವಳಿ ಮಿತಿ ಮೀರಿದೆ. ನಿನ್ನೆ ಒಂದೇ ದಿನ ವಿಶ್ವದಲ್ಲಿ 24 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ವಿಶ್ವದಲ್ಲಿ ಈವರೆಗೆ ಕೊರೋನಾ ಬಂದಿರೋರ ಸಂಖ್ಯೆ 30 ಕೋಟಿಯ ಗಡಿ ದಾಟಿದೆ. ಮೊದಲ 10 ಕೋಟಿ ಮಂದಿಗೆ ಕೊರೋನಾ ಬರೋಕೆ ಒಂದು ವರ್ಷ ಬೇಕಾಗಿತ್ತು. ನಂತರದ 10 ಕೋಟಿ 6 ತಿಂಗಳಲ್ಲಿ ಪತ್ತೆಯಾಯ್ತು. ಆದ್ರೆ ಅದಕ್ಕಿಂತಲೂ ವೇಗದಲ್ಲಿ ಅಂದ್ರೆ ಐದೇ ತಿಂಗಳಲ್ಲಿ ಮತ್ತೂ 10 ಕೋಟಿ ಮಂದಿಗೆ ಸೋಂಕು ತಗುಲಿದಂತಾಗಿದೆ.

ಇನ್ನು ನಿನ್ನೆ ಅಮೆರಿಕ ಒಂದ್ರಲ್ಲೇ 7.27 ಲಕ್ಷ ಮಂದಿಗೆ ಕೊರೋನಾ ಅಂಟಿದೆ. ಆಸ್ಪತ್ರೆಗೆ ದಾಖಲಾಗ್ತಿರೋರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಯುನೈಟೆಡ್ ಕಿಂಗ್​ಡಮ್​ನಲ್ಲಿ 1.79 ಲಕ್ಷ ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಫ್ರಾನ್ಸ್​ನಲ್ಲಿ ನಿನ್ನೆ ಒಂದೇ ದಿನ 2.58 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 72 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.

ಫಿಲಿಪ್ಪೀನ್ಸ್​ನಲ್ಲಿ ಕೊರೋನಾ ಹಾವಳಿ ಇಡ್ತಿದೆ.. ಕಳೆದ 24 ಗಂಟೆಯಲ್ಲಿ 17,220 ಮಂದಿಗೆ ಸೋಂಕು ತಗುಲಿದ್ದು, ಇದು ಸೆಪ್ಟೆಂಬರ್ 26ರ ನಂತರದ ಅತಿ ಹೆಚ್ಚು ಪ್ರಕರಣವಾಗಿದೆ. ಇಲ್ಲಿ ಲಸಿಕೆ ಹಾಕಿಸಿಕೊಳ್ಳದವರು ಮನೆಯಿಂದ ಹೊರಬರುವಂತಿಲ್ಲ ಅಂತ ಅಧ್ಯಕ್ಷ ರೋಡ್ರಿಗೋ ದುತುರ್ತೆ ಆದೇಶಿಸಿದ್ದಾರೆ. ಒಂದು ವೇಳೆ ಹೊರಗೆ ಬಂದು ಸುತ್ತಾಡಿದ್ರೆ ಅಂಥವರನ್ನು ಅರೆಸ್ಟ್ ಮಾಡಲಾಗುತ್ತೆ ಅಂತ ಕೂಡ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply