ಭಾರತದಲ್ಲಿ ಕೊರೋನಾ ಹೆಚ್ಚಿದ್ದು ಹೇಗೆ? WHO ಹೇಳಿದ್ದೇನು?

masthmagaa.com:

ಭಾರತದಲ್ಲಿ ಕೊರೋನಾ ನಿರಂತರ ಏರುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಒಂದು ಕೊರೋನಾ ರೂಪಾಂತರಿ ತಳಿ ತುಂಬಾ ವೇಗವಾಗಿ ಹರಡುತ್ತಿದೆ. ತುಂಬಾ ಬೇಗ ಜನರನ್ನು ಬಲಿ ಪಡೆದುಕೊಳ್ತಿದೆ ಅಂತ ಹೇಳಿದ್ಧಾರೆ. ಭಾರತದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಹಲವು ಕಾರಣಗಳಿದ್ದು, ಬಿ.1.617 ಅನ್ನೋ ಹೆಸರಿನ ರೂಪಾಂತರಿ ತಳಿ ಪ್ರಮುಖ ಕಾರಣವಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಈ ಬಿ.1.617 ತಳಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸದ್ಯದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಮಹತ್ವದ ಹೆಜ್ಜೆ ಇಡೋ ನಂಬಿಕೆ ಇದೆ ಅಂತ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಇನ್ನು ಯುನೈಟೆಡ್ ಕಿಂಗ್​ಡಮ್​​ನ ಹೆಲ್ತ್​ ಡಿಪಾರ್ಟ್​​ಮೆಂಟ್​​ನ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್​​​​ ಸಂಸ್ಥೆ, ಭಾರತದ ರೂಪಾಂತರಿ ಕೊರೋನಾ ಮತ್ತು ಬ್ರಿಟನ್​ನ ರೂಪಾಂತರಿ ಕೊರೋನಾದ ಹರಡುವ ದರ ಒಂದೇ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply