ವಿರಾಟ್‌ ಕೊಹ್ಲಿಇದ್ರಲ್ಲೂ ನಂಬರ್‌ 1!

masthmagaa.com:

ಭಾರತೀಯ ವಿವಾಹ ಸಂಪ್ರದಾಯಗಳು ಪ್ರದೇಶ, ಧರ್ಮ, ಸಮಾಜ ಮತ್ತು ವಧು ಮತ್ತು ವರನ ಪರ್ಸ್‌ನಲ್‌ ಟೇಸ್ಟ್‌ಗಳು ಚೇಂಜ್‌ ಇರತ್ತೆ. ಅದರಲ್ಲೂ ಭಾರತದಲ್ಲಿನ ವಿವಾಹಗಳು ತಮ್ಮ ದುಂದುವೆಚ್ಚ ಮತ್ತು ವೈಭವಕ್ಕೆ ಪ್ರಪಂಚದಾದ್ಯಂತ ಫೇಮಸ್‌ ಆಗಿದೆ. ಎಲ್ಲಾ ಮದುವೆಗಳು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿದ್ದರೂ, ಕೆಲವೊಂದು ಮದುವೆ ಹೆಚ್ಚು ಚರ್ಚೆಯಾಗುತ್ತವೆ. ಬಾಲಿವುಡ್ ಮದುವೆಗಳು, ಎಲ್ಲಕ್ಕಿಂತ ಹೆಚ್ಚು ಅಟ್ರಾಕ್ಟೀವ್‌ ಆಗಿರತ್ತೆ. ಮತ್ತು ಬಾಲಿವುಡ್‌ ನಡುವೆ ಅದೊಂದು ಟ್ರೆಂಡ್‌ಸೆಟ್ಟರ್‌ ಆಗೊಗಿದೆ. ರೆಡ್ ಕಾರ್ಪೆಟ್ ಮೇಲೆ ನಡೆಯುವ ಆಕ್ಟರ್‌ಗಳ ಕಾಸ್ಟ್ಲಿ ಡೆಕೋರೆಷನ್ಸ್‌, ವಿಚಿತ್ರವಾದ ಮತ್ತು ಅದ್ಭುತವಾದಂತ ವೆಡ್ಡಿಂಗ್‌ ಪ್ಲೇಸ್‌ಗಳು ಅಥವಾ ಇಮ್ಯಾಜಿನ್‌ ಮಾಡ್ಲೀಕ್ಕು ಸಾಧ್ಯಾನೇ ಇಲ್ಲದಂತ ಅವರ ಹೈಫೈ ಬಟ್ಟೆ ಮತ್ತು ಭಾರೀ ಆಭರಣಗಳು, ನಾವು ಬಾಲಿವುಡ್ ಮದುವೆಗಳನ್ನು ಉಸಿರುಗಟ್ಟಿಸಿಕೊಂಡು ನೋಡಬೇಕು ಆ ರೀತಿ ಇರತ್ತೆ. ಇವತ್ತಿನ ಈ ವರದಿಯಲ್ಲಿ ಯಾವ ಯಾವ ಬಾಲಿವುಡ್‌ ಆಕ್ಟರ್‌ಗಳು ತಮ್ಮ ಮದುವೆಗೆ ಎಷ್ಟು ಖರ್ಚು ಮಾಡಿದ್ದಾರೆ ಅನ್ನೊದನ್ನ ನೋಡೊಣ.

1. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ :
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್‌ 11, 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿರುವ ವಿಶ್ವದ ಎರಡನೇ ಅತ್ಯಂತ ದುಬಾರಿ ರೆಸಾರ್ಟ್‌ನಲ್ಲಿ ವಿವಾಹವಾದರು. ಈ ಹೋಟೆಲ್ ಕೊಠಡಿಗಳು ಒಂದು ರಾತ್ರಿಗೆ 13.5 ಲಕ್ಷ ರೂ. ಇವರಿಬ್ಬರೂ ಸಭ್ಯಸಾಚಿ ಬಟ್ಟೆಗಳನ್ನ ಧರಿಸಿದ್ದರು. ಅವರ ಮದುವೆಯ ವೆಚ್ಚ ಸುಮಾರು 100 ಕೋಟಿ ರೂ. ಅಂತ ವರದಿಯಾಗಿದೆ.

2.ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ :
ಬಾಲಿವುಡ್‌ನ ಪವರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್‌ 14, 2018 ರಲ್ಲಿ ಇಟಲಿಯಲ್ಲಿ ವಿವಾಹವಾದರು.ಲೇಕ್ ಕೊಮೊದಲ್ಲಿರುವ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೋದಲ್ಲಿ ಎಲ್ಲಾ ಮದುವೆಯ ಸಂಭ್ರಮಗಳು ನಡೆದವು.ವರದಿಯ ಪ್ರಕಾರ, ರೆಸಾರ್ಟ್‌ನಲ್ಲಿ ಪ್ರತಿ ರಾತ್ರಿ 24 ಲಕ್ಷಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಕನಿಷ್ಠ 5 ದಿನಗಳ ಕಾರ್ಯಕ್ರಮ ಇದಾಗಿತ್ತು, ಮತ್ತು ಪಾದರಕ್ಷೆಗಳಿಂದ ಹಿಡಿದು ಕರವಸ್ತ್ರದವರೆಗೆ ಎಲ್ಲವನ್ನೂ ಕಸ್ಟಮೈಸ್ ಮಾಡಲಾಗಿತ್ತು. ಇವರ ಮದುವೆಯ ವೆಚ್ಚ ಸುಮಾರು 77 ಕೋಟಿ ಆಗಿರಬಹುದು ಅಂತ ವರದಿಯಾಗಿದೆ.


3.ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ :
ಅಕ್ಟೋಬರ್‌ 16 , 2012 ಸೈಫ್ ಅಲಿ ಅವರ ಮನೆ ಫಾರ್ಚೂನ್ ಹೈಟ್ಸ್‌ನಲ್ಲಿಇವರ ಮದುವೆ ನಡೆಯಿತು. ಇವರ ರಿಸಪ್ಷನ್‌ನ್ನು ತಾಜ್‌ಮಹಲ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ನಡೆಯಿತು. ಕರೀನಾ ಕಪೂರ್ ತನ್ನ ಮದುವೆಯ ದಿನದಂದು ಧರಿಸಿದ್ದ ಚಿನ್ನಾಭರಣ ಮತ್ತು ಆಕೆಯ ಲೆಹೆಂಗಾ ಬೆಲೆ 4 ಕೋಟಿ 50 ಲಕ್ಷ. ಇವರ ಮದುವೆಯ ಖರ್ಚು ಸುಮಾರು 10 ಕೋಟಿ ಆಗಿರಬಹುದು ಅಂತ ವರದಿಯಾಗಿದೆ.

4.ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ :
ವಿಶ್ವ-ಪ್ರಸಿದ್ಧ ನೀಲಿ ಕಣ್ಣಿನ ನಟಿ 2007 ರಲ್ಲಿ ಲೆಜೆಂಡರಿ ಬಾಲಿವುಡ್ ನಟ, ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರೊಂದಿಗಿನ ಐಶ್ವರ್ಯಾ ರೈ ಅವರ ವಿವಾಹವು ಎಪ್ರಿಲ್‌ 20, 2007ರಲ್ಲಿ ನಡೆಯಿತು. ಐಶ್ವರ್ಯ ರೈ ಸೀರೆ ಕಾಸ್ಟ್‌ ಸುಮಾರು 75 ಲಕ್ಷ. ಇವರ ಸೀರೆಯಲ್ಲಿ ನಿಜವಾದ ಚಿನ್ನದ ಎಳೆಗಳು ಇದ್ದವು. ‘ಪ್ರತೀಕ್ಷಾ’ ಎಂಬ ಬಚ್ಚನ್ ಬಂಗಲೆಯಲ್ಲಿ ಇವರ ಮದುವೆ ನಡೆಯಿತು. ಇವರ ಮದುವೆಯ ಖರ್ಚು ಸುಮಾರು 6 ಕೋಟಿ ಆಗಿರಬಹುದು ಅಂತ ಅಂದಾಜಿಸಲಾಗಿದೆ.

5.ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ :
ಫಬ್ರವರಿ 7, 2023ರಂದು ಇವರ ಮದುವೆಯಾಯಿತು. ರಾಜಸ್ಥಾನದ ಭವ್ಯವಾದ ಸೂರ್ಯಗೃಹ ಅರಮನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಅರಮನೆಯಲ್ಲಿ ಒಂದು ದಿನದ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಸುಮಾರು 1.5 ಕೋಟಿ ರೂಪಾಯಿ ಸಿದ್ಧಾರ್ಥ್ ಮತ್ತು ಕಿಯಾರಾ ಅವರ ಮದುವೆ ಮೂರು ದಿನಗಳ ಕಾಲ ನಡೆದಿತ್ತು, ಅವರ ಮದುವೆಗೆ 6 ಕೋಟಿ ರೂಪಾಯಿ ಖರ್ಚಾಗಿರಬಹುದು ಅಂತ ವರದಿಯಾಗಿದೆ.

6. ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ :
ನವೆಂಬರ್‌ 18, 2014ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರು ದೆಹಲಿ ಮೂಲದ ಉದ್ಯಮಿ ಆಯುಷ್ ಶರ್ಮಾ ಅವರನ್ನ ವಿವಾಹವಾದರು. ಇವರ ಅದ್ದೂರಿ ಮದುವೆ ಹೈದರಾಬಾದ್‌ನ ತಾಜ್ ಫಲಕ್ನುಮಾ ಅರಮನೆಯಲ್ಲಿ ನಡೆಯಿತು, ಇದಕ್ಕೆ 5 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವರದಿಯಾಗಿದೆ.

7. ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರ :
ಒಂದು ಕಾಲದಲ್ಲಿ ಎಲ್ಲಾ ಭಾರತೀಯರ ಫೇವರೇಟ್‌ ಆಗಿದ್ದ ಶಿಲ್ಪಾ ಶೆಟ್ಟಿ ಲಂಡನ್ ಮೂಲದ ಉದ್ಯಮಿ ರಾಜ್ ಕುಂದ್ರಾ ಅವರನ್ನುಮಹಾರಾಷ್ಟ್ರದ ಖಂಡಾಲಾದಲ್ಲಿ ನವೆಂಬರ್‌ 22, 2009ರಂದು ಅದ್ದೂರಿಯಾಗಿ ವಿವಾಹವಾದರು, ಕೆಂಪು ಸ್ವರೋವ್ಸ್ಕಿ ಹರಳುಗಳನ್ನು ಹೊಂದಿರುವ 50 ಲಕ್ಷ ರೂಪಾಯಿಯ ಸೀರೆಯನ್ನು ಶಿಲ್ಪಾ ಶೆಟ್ಟಿ ಉಟ್ಟಿದ್ದರು. ಆಭರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವರು 3 ಕೋಟಿ ಬೆಲೆಯ ಕತ್ತರಿಸದೇ ಇರುವಂತ ವಜ್ರಗಳು ಮತ್ತು ಪಚ್ಚೆಗಳಿಂದ ಕೂಡಿದ ಭವ್ಯವಾದ ಕುಂದನ್ ಆಭರಣವನ್ನು ಧರಿಸಿದ್ದರು. ಇವರ ಮದುವೆಗೆ ಸುಮಾರು 4 ಕೋಟಿ ಖರ್ಚು ಮಾಡಲಾಗಿದೆ ಅಂತ ವರದಿಯಾಗಿದೆ.

8.ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ :
ಮಾರ್ಚ್‌ 19, 2022 ರಾಜಸ್ಥಾನದ ಹೊಸ ಐಷಾರಾಮಿ ರೆಸಾರ್ಟ್, ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಇವರ ಮದುವೆ ನಡೆಯಿತು. ಸೆಲ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿಷೇಧದೊಂದಿಗೆ, ಇವರ ಮದುವೆ ನೆಡಯಿತು. ಸಭ್ಯಸಾಚಿ ಲುಕ್‌ ಮತ್ತು ಸಭ್ಯಸಾಚಿ ಆಭರಣಗಳನ್ನ ಇವರು ಬಳಸಿದ್ದರು. ಇವರ ಮದುವೆಗೆ ಸುನಾರು 4 ಕೋಟಿ ಖರ್ಚಾಗಿರಬಹುದು

9.ಸೋನಂ ಕಪೂರ್ ಮತ್ತು ಆನಂದ್ ಅಹುಜಾ :
ಮೂರು ವರ್ಷಗಳ ಡೇಟಿಂಗ್ ನಂತರ, ದಂಪತಿಗಳು ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಮೇ 8, 2018ರಲ್ಲಿ ಇವರು ಮದುವೆಯಾದರು.ವಿಐಪಿಗಳು ಮತ್ತು ಪ್ರಪಂಚದಾದ್ಯಂತದ ಅನೇಕ ಸೆಲೆಬ್ರಿಟಿಗಳು ಅದ್ದೂರಿ ಮದುವೆಯಲ್ಲಿ ಭಾಗವಹಿಸಿದ್ರು. ಇವರ ಮದುವೆಯ ಖರ್ಚು ಸುಮಾರು 4 ಕೋಟಿ ಅಂತ ಅಂದಾಜಿಸಲಾಗಿದೆ.

10.ಪ್ರಿಯಾಂಕಾ ಚೋಪ್ರಾ & ನಿಕ್ ಜೋನಾಸ್ :
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಡಿಸೆಂಬರ್‌ 1, 2018 ರಲ್ಲಿ ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ವಿವಾಹವಾದರು.ಆಚರಣೆಗಳು ಮೂರು ದಿನಗಳ ಕಾರ್ಯಕ್ರಮವಾಗಿದ್ದು, ಹಿಂದೂ ವಿವಾಹ ಸಮಾರಂಭ ಮತ್ತು ಕ್ರಿಶ್ಚಿಯನ್ ಆಚರಣೆಯೊಂದಿಗೆ ಮದುವೆಯಾದರು. ಇವರ ಮದುವೆಯ ಖರ್ಚು ಸುಮಾರು 3 ಕೋಟಿ ಆಗಿರಬಹುದು ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply