ವಿರಾಟ್ ಕೊಹ್ಲಿಯ 9 ತಿಂಗಳ ಮಗುವಿಗೆ ಅತ್ಯಾಚಾರ ಬೆದರಿಕೆ!

masthmagaa.com:

ಟಿ20 ವಿಶ್ವಕಪ್ ಕ್ರಿಕೆಟ್​​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ದುಷ್ಟ ಹುಳುವೊಂದು ಈ ಬೆದರಿಕೆ ಒಡ್ಡಿದ್ದು, ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಆರೋಪಿಯನ್ನು ಅರೆಸ್ಟ್ ಮಾಡಿರೋ ಬಗ್ಗೆ, ಎಫ್​ಐಆರ್ ಕುರಿತು ಮಾಹಿತಿ ನೀಡಿ, ಒಂದ್ವೇಳೆ ಇನ್ನೂ ಅರೆಸ್ಟ್ ಮಾಡಿಲ್ಲ ಅಂತಾದ್ರೆ ಅರೆಸ್ಟ್ ಮಾಡೋಕೆ ತಗೊಂಡಿರೋ ಕ್ರಮಗಳ ಬಗ್ಗೆ ನವೆಂಬರ್ 8ರ ಒಳಗೆ ಮಾಹಿತಿ ಕೊಡಿ ಅಂತ ಸೂಚಿಸಲಾಗಿದೆ. ಜೊತೆಗೆ ಈ ಬಗ್ಗೆ ಟ್ವೀಟ್ ಮಾಡಿರೋ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​​, 9 ತಿಂಗಳ ಮಗುವಿಗೆ ಈ ರೀತಿ ಬೆದರಿಕೆ ಒಡ್ಡೋದು ನಾಚಿಕೆಗೇಡಿನ ವಿಚಾರ. ಭಾರತ ತಂಡ ಸಾವಿರಾರು ಬಾರಿ ಹೆಮ್ಮೆಪಡುವಂತೆ ಮಾಡಿದೆ. ಆದ್ರೀಗ ಸೋತಾಗ ಈ ರೀತಿ ಸಿಲ್ಲಿಯಾಗಿ ಯಾಕೆ ವರ್ತಿಸಬೇಕು ಅಂತ ಕಿಡಿಕಾರಿದ್ದಾರೆ.

ಇನ್ನು ಕಳೆದ ವರ್ಷ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್​​ ಸೋತಾಗ ಸೋಷಿಯಲ್ ಮೀಡಿಯಾದಲ್ಲಿ ಧೋನಿ ಮಗಳು ಝೀವಾಗೂ ಇದೇ ರೀತಿ ಬೆದರಿಕೆ ಒಡ್ಡಲಾಗಿತ್ತು. ಈ ಪ್ರಕರಣ ಸಂಬಂಧ ಗುಜರಾತ್ ಮೂಲದ 16 ವರ್ಷದ ಬಾಲಕನನ್ನು ಅರೆಸ್ಟ್ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇವರೆಲ್ಲಾ ದ್ವೇಷ ಭಾವನೆಗಳಿಂದ ತುಂಬಿ ಹೋಗಿದ್ದಾರೆ.. ಯಾಕಂದ್ರೆ ಅವರಿಗೆ ಯಾರೂ ಪ್ರೀತಿ ನೀಡೇ ಇಲ್ಲ. ಅವರನ್ನು ಕ್ಷಮಿಸಿ ಬಿಡಿ ವಿರಾಟ್ ಕೊಹ್ಲಿ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply