ರಸ್ತೆ ಬದಿ ಪಾನಿಪೂರಿ ಮಾಡಲು ಇಳಿದ ಮಾಹಿ..! ವಿಡಿಯೋ ವೈರಲ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಒಂದು ವಿಡಿಯೋ ತುಂಬಾ ವೈರಲ್ ಆಗ್ತಿದೆ. ಇದರಲ್ಲಿ ಮಾಹಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ತಮ್ಮ ಮಾಜಿ ಸಹ ಆಟಗಾರರಾದ ರುದ್ರ ಪ್ರತಾಪ್ ಸಿಂಗ್​, ಪೀಯೂಷ್ ಚಾವ್ಲಾಗೆ ಪಾನಿಪೂರಿ ರೆಡಿ ಮಾಡಿಕೊಡ್ತಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇಟ್ ಮಾಡಿದ್ದಾರೆ. ಜೊತೆಗೆ ನಮ್ಮ ರಾಕ್​ಸ್ಟಾರ್​ ಪಾನಿಪೂರಿ ಮಾಡ್ತಿದ್ದಾರೆ ಅಂತ ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಹಲವರು ಧೋನಿಯನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಟ್ವಿಟ್ಟರ್ ಬಳಕೆದಾರರೊಬ್ಬರು ಪಿಯೂಷ್ ಚಾವ್ಲಾ ಜೊತೆ ಧೋನಿಯನ್ನು ನೋಡಲು ಖುಷಿಯಾಗ್ತಿದೆ ಅಂತ ಬರೆದ್ರೆ, ಮತ್ತೊಬ್ಬರು ಮಾಹಿ ತುಂಬಾ ಪ್ರತಿಭಾನ್ವಿತ ಅಂತ ಬರೆದುಕೊಂಡಿದ್ದಾರೆ. ಅದೇ ರೀತಿ ಇನ್ನೊಬ್ಬರು, ಅವರು ಭಾಗ್ಯಶಾಲಿಗಳು..ನನಗೆ ಹೊಟ್ಟೆ ಉರಿಯಾಗ್ತಿದೆ ಅಂತೆಲ್ಲಾ ಬರೆದುಕೊಂಡಿದ್ದಾರೆ.

Contact Us for Advertisement

Leave a Reply