ಮೇಹುಲ್‌ ಚೋಕ್ಸಿ ಎತ್ತಾಕ್ಕೊಂಡು ಬರಲು ಡೊಮಿನಿಕಾದಲ್ಲಿ ಭಾರತದ ವಿಮಾನ!

-Amar Prasad
@amarprasad_ap

ಮೇಹುಲ್ ಚೋಕ್ಸಿಯನ್ನ ನೇರವಾಗಿ ಭಾರತಕ್ಕೆ ಹಸ್ತಾಂತರಿಸಬೇಕು ಅಂತ ಭಾರತ ಸರ್ಕಾರ ಡೊಮಿನಿಕಾ ಸರ್ಕಾರಕ್ಕೆ ನೇರವಾಗಿ ಸೂಚಿಸಿದೆ. ಮೇಹುಲ್ ಚೋಕ್ಸಿ ಭಾರತದ ನಾಗರಿಕ, ಇಲ್ಲಿ ಸುಮಾರು ೧೫ ಸಾವಿರ ಕೋಟಿ ಸಾರ್ವಜನಿಕರ ಹಣವನ್ನ ನುಂಗಿ ನೀರು ಕುಡಿದು ಈಗ ತಲೆ ಮರೆಸಿಕೊಂಡಿದ್ದಾನೆ. ಭಾರತದ ಕಾನೂನುಗಳಿಂದ ತಪ್ಪಿಸಿಕೊಳ್ಳೋ ದುರುದ್ದೇಶದಿಂದಲೇ ಆತ ಆಂಟಿಗುವಾದ ಪೌರತ್ವ ಪಡೆದಿರೋದು. ಈತನ ಮೇಲೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಇದೆ. ಇದೆಲ್ಲವನ್ನ ಪರಿಗಣಿಸಿ ಈ ಕೂಡಲೇ ಚೋಕ್ಸಿಯನ್ನ ಭಾರತಕ್ಕೆ ಗಡಿಪಾರು ಮಾಡಬೇಕು ಅಂತ ಭಾರತ ಸರ್ಕಾರ ಡೊಮಿನಿಕಾಗೆ ಸೂಚಿಸಿದೆ. ಭಾರತದ ಪೌರತ್ವ ಕಾನೂನಿ ಪ್ರಕಾರವೇ ನೋಡಿದ್ರೂ ಮೇಹುಲ್ ಚೋಕ್ಸಿ ಆಂಟಿಗುವಾ ಪೌರತ್ವ ಪಡೆದ ಕ್ಷಣದಿಂದಲೇ ಅವರ ಭಾರತದ ಪೌರತ್ವ ಆಟೋಮ್ಯಾಟಿಕ್ ಆಗಿ ರದ್ದಾಗುತ್ತೆ. ಸೋ ಅವರು ಈಗ ಭಾರತದ ಪ್ರಜೆಯೇ ಅಲ್ಲ. ಸೋ ಭಾರತಕ್ಕೆ ಹಸ್ತಾಂತರ ಮಾಡಬಾರದು ಅಂತ ಚೋಕ್ಸಿ ಪರ ವಕೀಲರು ಆಗ್ರಹ ಮಾಡಿದ್ದರು. ಆದ್ರೆ ಈಗಾಗಲೇ ಭಾರತ ಸರ್ಕಾರ ಚೋಕ್ಸಿಯನ್ನ ಹಿಡಿದು ತರಲು ಎಲ್ಲ ವ್ಯವಸ್ಥೆ ಮಾಡಿದ್ದು ಆಲ್ರೆಡಿ ಒಂದು ಪ್ರೈವೇಟ್ ಜೆಟ್ ಡೊಮಿನಿಕಾದ ಡಗ್ಲೌಸ್ ಚಾರ್ಲಸ್ ಏರ್ಪೋರ್ಟ್ ನಲ್ಲಿ ನಿಂತಿದೆ ಅಂತ ಸ್ವತಃ ಡೊಮಿನಕಾ ಪ್ರಧಾನಿ ಗೇಸ್ಟೋನ್ ಬ್ರೋನೆ ಹೇಳಿದ್ದಾರೆ. ಅಂದಹಾಗೆ ನೀವು ಈಗ ಸ್ಕ್ರೀನ್ ಮೇಲೆ ನೋಡ್ತಿರೋ ಫೋಟೋ ಡೊಮಿನಿಕಾದಲ್ಲಿ ಬಂಧನದಲ್ಲಿರೋ ಚೋಕ್ಸಿಯ ಈಗಿನ ಗೆಟಪ್. ತಲೆ ಮರೆಸಿಕೊಂಡು ಓಡಿ ಓಡಿ ಹೀಗಿದ್ದ ಚೋಕ್ಸಿ ಈಗ ಹೀಗಾಗಿದ್ದಾರೆ. ಒಂದು ಕಣ್ಣು ಅಂತೂ ಯಾರೋ ಹೊಡೆದಂತೆ ಕೆಂಪಾಗಿ ಹೋಗಿದೆ.

-masthmagaa.com

Contact Us for Advertisement

Leave a Reply