ಯುಕ್ರೇನ್‌ ಯುದ್ದ ಅಂತ್ಯಗೊಳಿಸೋಕೆ ಭಾರತ ಸಮರ್ಥವಾಗಿದೆ: ಅಮೆರಿಕ

masthmagaa.com:

ದಿಲ್ಲಿಯಲ್ಲಿ ನಡೆದ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪ್ರಮುಖವಾಗಿ ರಷ್ಯಾ-ಯುಕ್ರೇನ್‌ ಸಂಘರ್ಷದ ಬಗ್ಗೆ ಚರ್ಚೆ ಮಾಡಲಾಗಿದೆ. ಈ ವೇಳೆ ಅಮೆರಿಕ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಇತರ ದೇಶಗಳು ಯುಕ್ರೇನ್‌ ಯುದ್ದವನ್ನ ಕೊನೆಗಾಣಿಸುವಂತೆ ರಷ್ಯಾಕ್ಕೆ ಒತ್ತಾಯಿಸಿವೆ. ಇದೇ ವೇಳೆ ರಷ್ಯಾ ಹಾಗೂ ಯುಕ್ರೇನ್‌ ನಡುವಿನ ಬಿಕ್ಕಟ್ಟನ್ನ ಸಾಲ್ವ್‌ ಮಾಡೋಕೆ ಭಾರತದ ಜೊತೆ ಕೆಲಸ ಮಾಡುವ ಇಚ್ಛೆಯನ್ನ ಅಮೆರಿಕ ಹೊರಹಾಕಿದೆ. ಸಂಘರ್ಷವನ್ನ ಅಂತ್ಯಗೊಳಿಸುವಲ್ಲಿ ಭಾರತದ ಪಾತ್ರದ ಕುರಿತು ಮಾತಾಡಿದ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ವಕ್ತಾರ ನೆಡ್‌ ಪ್ರೈಸ್‌, ಯುದ್ದವನ್ನ ಅಂತ್ಯಗೊಳಿಸುವಲ್ಲಿ ಭಾರತ ಸಮರ್ಥವಾಗಿದೆ. ʻಇದು ಯುದ್ಧದ ಯುಗವಲ್ಲʼ ಅಂತ ಕಳೆದ ವರ್ಷ ಪ್ರಧಾನಿ ಮೋದಿ ಹೇಳಿದ್ದನ್ನ ಇಡೀ ಜಗತ್ತು ಕೇಳಿತ್ತು. ಯಾಕಂದ್ರೆ ಮೋದಿಯವ್ರ ಮಾತು ಅಮೆರಿಕಕ್ಕೆ, ರಷ್ಯಾಗೆ ಹಾಗೂ ಇತರ ಎಲ್ಲ ದೇಶಗಳಿಗೂ ಮೀನಿಂಗ್‌ಫುಲ್‌ ಅನ್ಸಿತ್ತು. ಸೋ ಯುಕ್ರೇನ್‌ ವಿಷಯದಲ್ಲಿ ನಾವು ನಮ್ಮ ಭಾರತದ ಪಾರ್ಟ್ನರ್‌ಗಳ ಜೊತೆ ಕೆಲಸ ಮಾಡೋದನ್ನ ಮುಂದುವರೆಸ್ತೇವೆ ಅಂತ ಭಾರತ ಹಾಗೂ ಮೋದಿ ಅವ್ರನ್ನ ಪ್ರಶಂಸಿಸಿ ಮಾತಾಡಿದ್ದಾರೆ. ಜೊತೆಗೆ ಅಮೆರಿಕ ಹಾಗೂ ಭಾರತದ ಸಂಬಂಧಕ್ಕಿಂತ ರಷ್ಯಾ ಹಾಗೂ ಭಾರತದ ಸಂಬಂಧ ವಿಭಿನ್ನವಾಗಿದೆ. ರಷ್ಯಾ ಜೊತೆ ಭಾರತ ಸುದೀರ್ಘವಾದ ಐತಿಹಾಸಿಕ ಸಂಬಂಧಗಳನ್ನ ಹೊಂದಿದೆ ಅಂತ ಪ್ರೈಸ್‌ ಹೇಳಿದ್ದಾರೆ. ಇದರೊಂದಿಗೆ ಭಾರತ, ಅಮೆರಿಕಕ್ಕಿಂತ ರಷ್ಯಾ ಜೊತೆ ಭಿನ್ನವಾದ ವಿಶೇಷ ಸಂಬಂಧ ಹೊಂದಿದೆ ಅಂತ ಒನ್‌ ರೀತಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಎಲ್ಲ ಚರ್ಚೆಗಳ ಬಳಿಕವೂ ಯುಕ್ರೇನ್‌ ಸಂಘರ್ಷದ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳ ನಿಲುವನ್ನ ರಷ್ಯಾ ಹಾಗೂ ಚೀನಾ ಒಪ್ಪಿಲ್ಲ. ಇದರೊಂದಿಗೆ ಜಿ20 ಸಭೆ ಮತ್ತೊಮ್ಮೆ ಯಾವುದೇ ಸ್ಪಷ್ಟ ನಿರ್ಧಾರವಿಲ್ದೇ ಕೊನೆಗೊಂಡಿದೆ. ಅಂದ್ಹಾಗೆ ಸಭೆ ನಡೆಯುವ ಮೊದಲೇ ರಷ್ಯಾ ಹಾಗೂ ಚೀನಾಗೆ ಎಲ್ಲ ದೇಶಗಳು ಯಾವ ನಿರ್ಧಾರ ತಗೋತಾವೊ ಅದಕ್ಕೆ ನಿಮ್ಮ ಒಪ್ಪಿಗೆ ನೀಡಿ ಅಂತ ಭಾರತ ಕೇಳಿಕೊಂಡಿತ್ತು. ಆದ್ರೆ ಭಾರತದ ಪ್ರಯತ್ನದ ನಂತರವೂ ರಷ್ಯಾ ಹಾಗೂ ಚೀನಾ ತಮಗೆ ಅನಿಸಿದ್ದನ್ನ ಮಾಡಿವೆ.

-masthmagaa.com

Contact Us for Advertisement

Leave a Reply