ಬ್ರಿಟನ್‌ನಲ್ಲಿ ಜೂನ್‌ ತನಕವೂ ಕೊರೋನಾ ನಿರ್ಬಂಧ!

masthmagaa.com:

ಬ್ರಿಟನ್​ನಲ್ಲಿ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಪರಿಣಾಮ ಜನವರಿಯಲ್ಲಿ ಕಠಿಣ ಲಾಕ್​ಡೌನ್ ಹೇರಲಾಗಿತ್ತು. ಆದ್ರೆ ಈಗ ಬ್ರಿಟನ್​ನಲ್ಲಿ ಲಸಿಕೆ ಅಭಿಯಾನವೂ ಜೋರಾಗಿ ನಡೀತಿದೆ. ಕೊರೋನಾ ಕೂಡ ಸ್ವಲ್ಪ ನಿಯಂತ್ರಣಕ್ಕೆ ಬಂದಹಾಗೆ ಕಾಣ್ತಿದೆ. ಹೀಗಾಗಿ ಈಗ ನಿಧಾನಕ್ಕೆ ಅನ್​ಲಾಕ್​​ ಮಾಡುವ ಪ್ರಕ್ರಿಯೆ ಅನೌನ್ಸ್ ಮಾಡಿದ್ದಾರೆ ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್. ಹಂತಹಂತವಾಗಿ ಒಂದೊಂದೇ ವಲಯಗಳನ್ನ ಓಪನ್ ಮಾಡ್ತೀವಿ. ಆದ್ರೆ ಅನ್​ಲಾಕ್ ಪ್ರಕ್ರಿಯೆ ಪೂರ್ತಿಯಾಗಲು, ಅಂದ್ರೆ ಎಲ್ಲಾ ನಿರ್ಬಂಧಗಳನ್ನ ತೆಗೆಯಲು ಜೂನ್ 21ರ ತನಕ ಟೈಮ್ ಬೇಕು ಅಂತ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಬ್ರಿಟನ್​ನಲ್ಲಿ ಕೊರೋನಾಗೆ 1 ಲಕ್ಷದ 30 ಸಾವಿರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಜಗತ್ತಿನಲ್ಲೇ 5ನೇ ಅತಿಹೆಚ್ಚು. ಜೊತೆಗೆ ಬ್ರಿಟನ್ ಆರ್ಥಿಕತೆ 300 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದು ಹೋಗಿದೆ. ಹೀಗಾಗಿ ಮುಂದಿನ ದಿನಗಳು ಅತ್ಯಂತ ಕಠಿಣವಾಗಿರಲಿವೆ ಬ್ರಿಟನ್ ಪಾಲಿಗೆ.

-masthmagaa.com

Contact Us for Advertisement

Leave a Reply