ಯುಕ್ರೇನ್ ಸುದ್ದಿಗೆ ಬಂದ್ರೆ ರಷ್ಯಾನ ಸುಮ್ಮನೆ ಬಿಡಲ್ಲ: ಅಮೆರಿಕ ಕೆಂಡ

masthmagaa.com:
ರಷ್ಯಾ ಯುಕ್ರೇನ್ ಆಕ್ರಮಿಸಿದ್ರೆ ಆರ್ಥಿಕವಾಗಿ ದೊಡ್ಡಮಟ್ಟದ ಹಾನಿ ಮಾಡ್ತೀವಿ. ಪಶ್ಚಿಮ ಯೂರೋಪ್​​ನಲ್ಲಿ ಸೇನೆ ನಿಯೋಜನೆಯನ್ನು ಹೆಚ್ಚಿಸುತ್ತೀವಿ ಅಂತ ಅಮೆರಿಕ ಎಚ್ಚರಿಕೆ ನೀಡಿದೆ. ಇವತ್ತು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಡುವೆ ಮೀಟಿಂಗ್ ನಡೆಯಲಿದ್ದು, ಅಲ್ಲೂ ಯುಕ್ರೇನ್ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರಲಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಅಮೆರಿಕದ ಜೊತೆಗೆ ಫ್ರಾನ್ಸ್​, ಜರ್ಮನಿ, ಇಟಲಿ, ಬ್ರಿಟನ್ ಕೂಡ ಯುಕ್ರೇನ್​​​ಗೆ ಬೆಂಬಲ ಸೂಚಿಸಿದ್ದು, ಯುಕ್ರೇನ್​​ನ ಸಾರ್ವಭೌಮತ್ವವನ್ನು ಗೌರವಿಸಬೇಕು. ರಷ್ಯಾ ಎಲ್ಲಾ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಅಂತ ಒತ್ತಾಯಿಸಿವೆ. ಅಂದಹಾಗೆ ರಷ್ಯಾ ಯುಕ್ರೇನ್ ಗಡಿಯಲ್ಲಿ ಸಾವಿರಾರು ಯೋಧರನ್ನು ನಿಯೋಜಿಸಿದ್ದು, ಮುಂದಿನ ವರ್ಷ ಆರಂಭದಲ್ಲಿ ದಾಳಿಗೆ ಎಲ್ಲಾ ರೀತಿಯ ಪ್ಲಾನ್ ಮಾಡ್ಕೊಂಡಿದೆ ಅಂತ ಅಮೆರಿಕದ ಗುಪ್ತಚರ ಸಂಸ್ಥೆ ಇತ್ತೀಚೆಗಷ್ಟೇ ಎಚ್ಚರಿಸಿತ್ತು. ಅಂದಹಾಗೆ ರಷ್ಯಾ 2014ರಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿ, ಯುಕ್ರೇನ್​​ನಿಂದ ಕ್ರಿಮಿಯಾವನ್ನು ವಶಕ್ಕೆ ಪಡ್ಕೊಂಡಿತ್ತು. ಅದಕ್ಕೆ ಇನ್ನೂ ಕೂಡ ಅಂತಾರಾಷ್ಟ್ರೀಯ ಸಮುದಾಯ ಮಾನ್ಯತೆ ನೀಡಿಲ್ಲ. ಅದ್ರ ನಡುವೆಯೇ ಯುಕ್ರೇನ್​​ನ ಮತ್ತೊಂದಷ್ಟು ಭಾಗ ನುಂಗಲು ಪ್ಲಾನ್ ಮಾಡ್ತಿದೆ ಪುಟಿನ್ ದೇಶ.
-masthmagaa.com

Contact Us for Advertisement

Leave a Reply