ಕ್ರಿಪ್ಟೋ ಕರೆನ್ಸಿ ಬಗ್ಗೆ ಸಂಸತ್​​ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

masthmagaa.com:

ದೇಶದಲ್ಲಿ ಕ್ರಿಪ್ಟೊಕರೆನ್ಸಿ ಕುರಿತ ವಂಚನೆಗೆ ಸಂಬಂಧಿಸಿದ 8 ಪ್ರಕರಣಗಳ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸ್ತಿದೆ ಅಂತ ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರ ಕೊಟ್ಟಿದೆ. ಬಹುಶಃ ಇದರಲ್ಲಿ ಶ್ರೀಕಿ ಕೇಸ್​ ಕೂಡ ಸೇರಿರಬಹುದೇನೋ. ಇನ್ನು ರಾಜ್ಯಸಭೆಯಲ್ಲಿ ಮಾತನಾಡಿರೋ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕ್ರಿಪ್ಟೋಕರೆನ್ಸಿ ಅನ್ನೋದು ತುಂಬಾ ರಿಸ್ಕಿ ಏರಿಯಾ ಮತ್ತು ಸಂಪೂರ್ಣ ನಿಯಂತ್ರಣ ಮಾಡುವ ಚೌಕಟ್ಟಿನಲ್ಲಿಲ್ಲ. ಕ್ರಿಪ್ಟೊಕರೆನ್ಸಿ ಕುರಿತ ಜಾಹಿರಾತುಗಳನ್ನ ನಿಷೇಧಿಸುವ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಆರ್​ಬಿಐ ಮತ್ತು ಸೆಬಿ ಮೂಲಕ ಕ್ರಮ ಕೈಗೊಳ್ತಿದ್ದೀವಿ. ಸರ್ಕಾರ ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ ಕುರಿತ ಒಂದು ಮಸೂದೆಯನ್ನ ಮಂಡಿಸಲಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply