ಏನಿದು ಕೊರೋನಾವೈರಸ್..? ಅದರ ಲಕ್ಷಣಗಳೇನು..?

ಹಾಯ್ ಫ್ರೆಂಡ್ಸ್, ಹೊಸ ವೈರಸ್ ಭೀತಿ ಶುರುವಾಗಿದೆ. ಅದ್ರ ಹೆಸ್ರು ಕೊರೊನಾವೈರಸ್.. ಈಗಾಗಲೇ ಇದರ ಬಗ್ಗೆ ವಾಟ್ಸಾಪ್‍ನಲ್ಲಿ, ಅಲ್ಲಿ ಇಲ್ಲಿ ಹೆದರಿಕೆ ಹುಟ್ಟಿಸೋ ಸಂದೇಶ ಬರ್ತಾ ಇರ್ಬೋದು. ನಿಜಕ್ಕೂ ಇದೊಂದು ಭಯಾನಕ ವೈರಸ್ ಹೌದು.. ಚೈನಾದ ವುಹಾನ್‍ನಲ್ಲಿ ಶುರುವಾದ ಈ ವೈರಸ್ ಔಟ್ ಬ್ರೇಕ್ ಜಗತ್ತಿನಾದ್ಯಂತ ಹರಡ್ತಾ ಇದೆ. ಭಾರತ ಸೇರಿದಂತೆ ಜಗತ್ತಿನ ದೇಶಗಳು ಈ ವೈರಸ್‍ಗೆ ಹೆದರಿಹೋಗಿವೆ. ಪ್ರಧಾನಿ ನೇತೃತ್ವದಲ್ಲಿ ಈಗಾಗಲೇ ಅತ್ಯುನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಭಾರತ ಯಾವ ರೀತಿ ಇದನ್ನು ಎದುರಿಬೇಕೆಂದು ಚರ್ಚೆ ನಡೆಸಲಾಗಿದೆ. ಹಾಗಾದ್ರೆ ಈ ಭಯಾನಕ ವೈರಸ್ ಏನು..? ಇದು ದೇಹಕ್ಕೆ ಹತ್ತಿಕೊಂಡ್ರೆ ಏನಾಗುತ್ತೆ..? ಇದಕ್ಕೆ ಔಷಧ ಇದ್ಯಾ ಇಲ್ವಾ..? ನಿಮಗೆ ಈ ವೈರಸ್ ತಗುಲಿದ್ರೆ ನೀವು ಏನ್ ಮಾಡ್ಬೇಕು..? ಅಂತ ಫಟಾಫಟ್ ಆಗಿ ನೋಡ್ತಾ ಹೋಗೋಣ..

ಏನಿದು ಕೊರೋನಾವೈರಸ್..?
ಫ್ರೆಂಡ್ಸ್, ಕೊರೋನಾವೈರಸ್. ಡಾಕ್ಟರ್‍ಗಳ ಭಾಷೆಯಲ್ಲಿ ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೋನಾ ವೈರಸ್.. ಇದು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುವ ಭಯಾನಕ ವೈರಸ್. ಇದೊಂದು ಸಿಂಗಲ್ ವೈರಸ್ ಅಲ್ಲ. ಇದು ಫ್ಯಾಮಿಲಿ ಆಫ್ ವೈರಸ್. ಇದರಲ್ಲಿ ಒಟ್ಟು 7 ರೀತಿಯ ವೈರಸ್‍ಗಳು ಇರುತ್ತವೆ. ಕೋರೋನಾ ವೈರಸ್ ಅಟ್ಯಾಕ್ ಆಗಿದೆ ಅಂತ ಗೊತ್ತಾದ್ಕೂಡ್ಲೇ ಅದ್ರ ಜೊತೆಗೆ ಯಾವ ವೈರಸ್ ಅಟ್ಯಾಕ್ ಆಗಿದೆ ಅಂತ ಚೆಕ್ ಮಾಡ್ಬೇಕಾಗುತ್ತೆ. ಇದು ಸಾಮಾನ್ಯವಾಗಿ ಜಾನುವಾರುಗಳಲ್ಲಿ ಕಂಡು ಬರುವ ವೈರಸ್ ಆಗಿದ್ದು, ಮನುಷ್ಯರಿಗು ಸುಲಭವಾಗಿ ಹರಡುತ್ತೆ.

ಕೊರೋನಾ ವೈರಸ್ ಡೇಂಜರ್ ಯಾಕೆ..?
ಕೊರೋನಾ ವೈರಸ್ ತುಂಬಾ ಡೇಂಜರ್ ಅಂತ ಹೇಳೋಕೆ 2 ಕಾರಣಗಳಿವೆ. ಮೊದಲನೆಯದಾಗಿ ಅದರ ಲಕ್ಷಣಗಳು. ಇದು ಸಾಮಾನ್ಯ ಜ್ವರದಂತೆಯೇ ಶುರುವಾಗುತ್ತೆ. ಹೀಗಾಗಿ ಜನ ಇದನ್ನ ಅದು ಇದು ಮಾತ್ರೆ ತಿನ್ಕೊಂಡು ಕೇರ್‍ಲೆಸ್ ಮಾಡ್ಬಿಡ್ತಾರೆ. ವೈದ್ಯರೂ ಸಹ ಈ ದರಿದ್ರ ಕೊರೋನಾವೈರಸ್‍ನ್ನು ಸುಲಭವಾಗಿ ಪತ್ತೆಹಚ್ಚೋಕೆ ಸಾಧ್ಯವಾಗಲ್ಲ. ಆದ್ರೆ ಗೊತ್ತಾಗುವಷ್ಟರಲ್ಲಿ ಇದ್ರ ಎಫೆಕ್ಟ್ ಹೆಚ್ಚಾಗಿರುತ್ತೆ. ಇದು ಡೇಂಜರ್ ಅಂತ ಹೇಳೋಕೆ ಇನ್ನೊಂದು ಕಾರಣ ಅಂದ್ರೆ ಅದು ಸಾವು.. ಈ ವೈರಸ್‍ಗೆ ಔಷಧವೇ ಇಲ್ಲ. ಈ ವೈರಸ್ ಅಟ್ಯಾಕ್ ಆದಂತಹ ಶೇಕಡಾ 35ರಷ್ಟು ಕೇಸ್‍ಗಳಲ್ಲಿ ರೋಗಿಗಳು ಸಾವನ್ನಪ್ಪುತ್ತಾರೆ. ಈ ಕಾರಣಗಳಿಂದ ಕೊರೋನಾ ವೈರಸನ್ನು ಜಗತ್ತಿನ 3ನೇ ಅತಿ ಅಪಾಯಕಾರಿ ವೈರಸ್ ಎಂದು ಕರೆಯಲಾಗುತ್ತೆ. ಇನ್ನು ಅತೀ ಡೇಂಜರಸ್ ವೈರಸ್‍ಗಳ ಪಟ್ಟಿಯಲ್ಲಿ ಮಾರ್ಬರ್ಗ್ ವೈರಸ್ ಇದೆ. ಈ ವೈರಸ್ ಬಂದ ನೂರರಲ್ಲಿ 90ರಷ್ಟು ರೋಗಿಗಳು ಸತ್ತೇ ಹೋಗ್ತಾರೆ. ಇನ್ನು 2ನೇ ಸ್ಥಾನದಲ್ಲಿ ಬರ್ಡ್ ಫ್ಲೂ ಅಥವಾ ಎಬೋಲಾ ವೈರಸ್ ಇದೆ. ಇದು ಅಟ್ಯಾಕ್ ಆದ ನೂರು ಜನರ ಪೈಕಿ 70ರಷ್ಟು ಜನ ಸಾವನ್ನಪ್ಪುತ್ತಾರೆ. ಇವೆರಡರ ಬಳಿಕ ಖತರ್ನಾಕ್ ವೈರಸ್ ಸ್ಥಾನದಲ್ಲಿ ಕೊರೋನಾ ವೈರಸ್ ಇದೆ.

ಕೊರೋನಾ ವೈರಸ್‍ಗೆ ಚಿಕಿತ್ಸೆ ಏನು..?
ಇಲ್ಲ..ಕೊರೋನಾವೈರಸ್‍ಗೆ ಯಾವುದೇ ರೀತಿಯ ಚಿಕಿತ್ಸೆಯನ್ನು ಇನ್ನೂ ಕಂಡು ಹಿಡಿದಿಲ್ಲ. ಇದೀಗ ಈ ವೈರಸ್ ಭೀತಿ ಹೆಚ್ಚಾಗಿರೋದ್ರಿಂದ ಇದಕ್ಕೆ ಮದ್ದು ಕಂಡು ಹಿಡಿಯೋ ಪ್ರಕ್ರಿಯೆ ಕೂಡ ಜೋರಾಗಿದೆ. ಅಮೆರಿಕಾ, ಚೀನಾ, ರಷ್ಯಾ, ಸೌದಿ ಅರೇಬಿಯಾ ಮತ್ತು ನೆದರ್‍ಲ್ಯಾಂಡ್… ಈ ಐದು ದೇಶಗಳು ಔಷಧ ಕಂಡು ಹಿಡಿಯೋಕೆ ಸರ್ಕಸ್ ಮಾಡ್ತಿವೆ.

ಈ ಸೈತಾನ ವೈರಸ್‍ನಿಂದ ಪಾರಾಗೋದು ಹೇಗೆ..?
ಮೊಟ್ಟ ಮೊದಲಿಗೆ ಈ ವೈರಸ್ ಅಂದ್ರೆ ಕೊರೋನಾವೈರಸ್ ಇರೋ ದೇಶಗಳಿಗೆ ಹೋಗುವವರು, ಅಲ್ಲಿಂದ ಬರುವವರು ಜಾಗೃತರಾಗಿರಬೇಕು. ಅಂಥಹ ದೇಶಗಳಿಗೆ ಅಥವಾ ಅದರ ಸುತ್ತಮುತ್ತಲಿನ ದೇಶಗಳಿಗೆ ಹೋಗಿ ಬಂದ್ರೆ ಕೂಡಲೇ ಟೆಸ್ಟ್ ಮಾಡಿಸಬೇಕು. ಈಗಾಗಲೇ ವೈರಸ್ ಪೀಡಿತ ದೇಶಗಳು ಮತ್ತು ಸುತ್ತಮುತ್ತಲಿನ ದೇಶಗಳು ಏರ್‍ಪೋರ್ಟ್‍ಗಳಲ್ಲಿ ಏರ್‍ಪೋರ್ಟ್‍ಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿವೆ. ಇನ್ನುಳಿದಂತೆ ಈ ವೈರಸ್ ಬೇರೆ ವೈರಸ್‍ಗಳಂತೆಯೇ ಅಂದ್ರೆ ಉಸಿರಾಟದಿಂದ, ವೈರಸ್ ಪೀಡತರ ಜೊತೆ ಕೈ ಕುಲುಕುವುದರಿಂದ ಈ ವೈರಸ್ ಹರಡುತ್ತೆ. ಹೀಗಾಗಿ ಬೇರೆ ವೈರಸ್‍ಗಳಿಗೆ ಎಚ್ಚರಿಕೆ ವಹಿಸುವಂತೆಯೇ ಈ ವೈರಸ್‍ಗೂ ಮುನ್ನೆಚ್ಚರಿಕೆ ವಹಿಸಬೇಕು. ಜ್ವರ ಬಂದ್ರೆ ಟೆಸ್ಟ್ ಮಾಡಿಸೋದು, ಮುಖಕ್ಕೆ ಮಾಸ್ಕ್ ಹಾಕೊಂಡು ಓಡಾಡೋದು..ಹೀಗೆ ವಿವಿಧ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬಹುದು. ಕೆಮ್ಮು, ತಲೆ ನೋವು, ಎದೆ ನೋವು, ಉಸಿರಾಟದ ಸಮಸ್ಯೆ ಇದರ ಆರಂಭಿಕ ಲಕ್ಷಣಗಳು.

Contact Us for Advertisement

Leave a Reply