ಟೆಸ್ಟ್​ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ: ಘಟಾನುಘಟಿಗಳು ಹೇಳಿದ್ದೇನು?

masthmagaa.com:

ವಿರಾಟ್ ಕೊಹ್ಲಿ ಟೆಸ್ಟ್​ ಕ್ಯಾಪ್ಟನ್​ಶಿಪ್​ನಿಂದ ಕೆಳಗಿಳಿದ ಬಳಿಕ ಘಟಾನುಘಟಿಗಳು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಬಿಸಿಸಿಐ, ಇಷ್ಟು ದಿನ ಟೆಸ್ಟ್ ಟೀಂ ನೇತೃತ್ವ ವಹಿಸಿದ ಕೊಹ್ಲಿಗೆ ಧನ್ಯವಾದಗಳು.. ಅವರ ನೇತೃತ್ವದಲ್ಲಿ ಟೀಂ ಇಂಡಿಯಾ ಮತ್ತೊಂದು ಹಂತಕ್ಕೆ ಹೋಯ್ತು. ಅವರು 68 ಪಂದ್ಯಗಳ ನೇತೃತ್ವ ವಹಿಸಿದ್ದು, ಅದ್ರಲ್ಲಿ 40ರಲ್ಲಿ ಗೆದ್ದು ಸಕ್ಸಸ್​ಫುಲ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ ಅಂತ ಹೇಳಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ, ವಿರಾಟ್ ಕೊಹ್ಲಿ ನಿರ್ಧಾರ ವೈಯಕ್ತಿಕ.. ಅವರ ನಿರ್ಧಾರವನ್ನು ನಾವು ಗೌರವಿಸ್ತೀವಿ ಅಂತ ಹೇಳಿದ್ದಾರೆ. ಟೀಂ ಇಂಡಿಯಾ ಒನ್​ಡೇ, ಟಿ20 ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರತಿಕ್ರಿಯಿಸಿ, ವಿರಾಟ್ ಕೊಹ್ಲಿ ನಿರ್ಧಾರದಿಂದ ಶಾಕ್ ಆಗಿದೆ. ಅವರ ಯಶಸ್ವೀ ನಾಯಕತ್ವಕ್ಕೆ ಧನ್ಯವಾದಗಳು.. ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಅಂತ ಟ್ವೀಟ್ ಮಾಡಿದ್ದಾರೆ. ಸಚಿನ್ ಕೂಡ ಟ್ವೀಟ್ ಮಾಡಿ, ವಿರಾಟ್ ಕೊಹ್ಲಿ ತಂಡಕ್ಕೆ ಯಾವಾಗಲೂ 100 ಪರ್ಸೆಂಟ್ ತೊಡಗಿಸಿಕೊಂಡಿದ್ದಾರೆ. ಅವರ ಭವಿಷ್ಯಕ್ಕೆ ಶುಭವಾಗಲಿ ಅಂತ ಹೇಳಿದ್ದಾರೆ. ಇನ್ನು ಯುವರಾಜ್ ಸಿಂಗ್, ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಕಿಂಗ್ ಕೊಹ್ಲಿ ಅವರದ್ದು ಗಮನಾರ್ಹ ಪ್ರಯಾಣ. ಕೆಲವೇ ಕೆಲವರು ಸಾಧಿಸಿದ್ದನ್ನು ಸಾಧಿಸಿದ್ದಾರೆ. ಸಮರ್ಥರಾಗಿದ್ದಾರೆ. ನೀವು ಪ್ರತಿ ಬಾರಿ ನಿಜವಾದ ಚಾಂಪಿಯನ್‌ ರೀತಿ ಆಡಿದ್ದೀರಿ ಅಂತ ಹಾಡಿ ಹೊಗಳಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಕೂಡ ಕ್ಯಾಪ್ಟೆನ್ಸಿಯಿಂದ ಕೊಹ್ಲಿ ಕೆಳಗಿಳಿದಿದ್ದಕ್ಕೆ ಭಾವುಕವಾಗಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply