ನಾಲ್ವರನ್ನು ಹೊತ್ತು 3 ದಿನ ಹಾರಾಡಲಿದೆ ಸ್ಪೇಸ್​ಎಕ್ಸ್ ನೌಕೆ!

masthmagaa.com:

ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್​ ಎಕ್ಸ್ ಸಂಸ್ಥೆ ನಾಳೆ ನಾಲ್ವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಮೂರು ದಿನಗಳ ಮಿಷನ್ ಇದಾಗಿದ್ದು, ಭೂಮಿಯ ಕಕ್ಷೆಗೆ ಸುತ್ತು ಹೊಡೆದುಕೊಂಡು ಭೂಮಿಗೆ ಮರಳಲಿದೆ. ಸ್ಪೇಸ್​ ಎಕ್ಸ್​ ಈಗಾಗಲೇ ನಾಸಾ ಸೇರಿದಂತೆ ಹಲವು ಗಗನಯಾತ್ರಿಗಳನ್ನು ಇಂಟರ್​ನ್ಯಾಷನಲ್ ಸ್ಪೇಸ್​ ಸ್ಟೇಷನ್​​ಗೆ ಕಳುಹಿಸಿದೆ. ಆದ್ರೆ ಖಾಸಗಿಯಾಗಿ ಯಾತ್ರಿಕರನ್ನು ಕಕ್ಷೆಗೆ ಕಳುಹಿಸುತ್ತಿರೋದು ಇದೇ ಮೊದಲು. ಈ ಮೂಲಕ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್​ ಎಕ್ಸ್ ಕೂಡ ಸ್ಪೇಸ್ ಟೂರಿಸಂಗೆ ಎಂಟ್ರಿ ಕೊಟ್ಟಿದೆ. ಈ ಮಿಷನ್​​ಗೆ ಇನ್​ಸ್ಪಿರೇಷನ್ 4 ಅಂತ ಹೆಸರಿಡಲಾಗಿದೆ. ಅಂದಹಾಗೆ ಇತ್ತೀಚೆಗೆ ವರ್ಜಿನ್ ಗೆಲಾಕ್ಟಿಕ್ ಮತ್ತು ಜೆಫ್ ಬೆಜೋಸ್ ನೇತೃತ್ವದ ಬ್ಲೂ ಒರಿಜಿನ್ ಸಂಸ್ಥೆಯ ರಾಕೆಟ್ ಬಾಹ್ಯಾಕಾಶ ಪ್ರವಾಶ ಕೈಗೊಂಡಿತ್ತು. ಆದ್ರೂ ಕೂಡ ಕಕ್ಷೆಗೆ ಹೋಗಿರಲಿಲ್ಲ. ಕಕ್ಷೆಗಿಂತ ಸ್ವಲ್ಪ ಕೆಳಗಿನವರೆಗೆ ಹೋಗಿ ವಾಪಸ್ ಬಂದಿತ್ತು. ಇದು ಕೆಲವೇ ಗಂಟೆಗಳ ಮಿಷನ್ ಆಗಿತ್ತು.

-masthmagaa.com

Contact Us for Advertisement

Leave a Reply