BREAKING NEWS: ಫೈಜರ್ ಲಸಿಕೆಗೆ WHO ಗ್ರೀನ್ ಸಿಗ್ನಲ್

masthmagaa.com:

ಕಳೆದ ವರ್ಷವಿಡೀ ಬರೀ ಕೊರೋನಾ ಕೊರೋನಾ ಅಂತ ಕಾಲ ಕಳೆದಿದ್ದಾಯ್ತು. ಈಗ ಹೊಸ ವರ್ಷದ ಆರಂಭದಲ್ಲಿ ಕೊರೋನಾ ಲಸಿಕೆ ಬಗ್ಗೆ ಹೆಚ್ಚು ಚರ್ಚೆ ಆಗೋ ಥರ ಕಾಣಿಸ್ತಿದೆ. 2021ರ ಆರಂಭದಲ್ಲಿ ಜಗತ್ತು ನಿಂತಿರೋ ಈ ಸಂದರ್ಭದಲ್ಲಿ ಈಗ ವಿಶ್ವದ 50ಕ್ಕೂ ಅಧಿಕ ದೇಶಗಳಲ್ಲಿ ಸಾರ್ವಜನಿಕ ಕೊರೋನಾ ಲಸಿಕೆ ಅಭಿಯಾನ ಶುರುವಾಗಿದೆ. ನಮ್ಮ ಭಾರತದಲ್ಲೂ ಲಸಿಕೆ ಅಭಿಯಾನ ಯಾವಾಗ ಬೇಕಾದರೂ ಶುರುವಾಗಬಹುದು ಅನ್ನೋ ದಿನಗಣನೆ ಆರಂಭವಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ, ಬಿಯೋನ್​​ಟೆಕ್​ ಹಾಗೂ ಅಮೆರಿಕದ ಫೈಝರ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಗ್ರೀನ್​ ಸಿಗ್ನಲ್​ ನೀಡಿದೆ. ಈಗಾಗಲೇ ಅಮೆರಿಕ, ಯುರೋಪ್ ಸೇರಿದಂತೆ ಮುಂದುವರಿದ ದೇಶಗಳಲ್ಲಿ ಅಲ್ಲಿನ ಔಷಧ ನಿಯಂತ್ರಣ ಪ್ರಾಧಿಕಾರಗಳು ಫೈಝಲ್ ಲಸಿಕೆಗೆ ಅನುಮತಿ ಕೊಟ್ಟು ಅಭಿಯಾನ ಕೂಡ ಶುರುವಾಗಿದೆ. ಹೀಗಿರೋವಾಗ ಈಗ ವಿಶ್ವ ಆರೋಗ್ಯ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿ ಏನು ಪ್ರಯೋಜನ ಅಂತ ನಿಮಗೆ ಪ್ರಶ್ನೆ ಮೂಡಬಹದು. ಉತ್ತರ ಸಿಂಪಲ್. ನೋಡಿ ಈ ವಿಶ್ವದಲ್ಲಿ ಎಲ್ಲಾ ದೇಶಗಳಲ್ಲೂ ಅಡ್ವಾನ್ಸ್ಡ್ ಟೆಕ್ನಾಲಜಿ ಮೂಲಕ ಪರಿಶೀಲಿಸಿ ಅನುಮೋದನೆ ಕೊಡೋಕೆ ವ್ಯವಸ್ಥೆಗಳಿಲ್ಲ. ಕೆಲ ಬಡ ದೇಶಗಳಲ್ಲಿ ಔಷಧ ನಿಯಂತ್ರಣ ಪ್ರಾಧಿಕಾರಗಳೇ ಇಲ್ಲ. ಅಂತಹ ದೇಶಗಳು ಎಲ್ಲದಕ್ಕೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಬರೋ ಮಾಹಿತಿಗಾಗಿ ಕಾದು ಕೂತಿರುತ್ತವೆ. ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಗೆ ಅನುಮತಿ ನೀಡಿದರೆ ಆ ಲಸಿಕೆಯನ್ನ ಈ ದೇಶಗಳೂ ಕಣ್ಣುಮುಚ್ಚಿ ಅನುಮೋದಿಸುತ್ತವೆ.

-masthmagaa.com

Contact Us for Advertisement

Leave a Reply