ಭಾರತದಲ್ಲಿ ವರದಿಯಾದಕ್ಕಿಂತ 10 ಪಟ್ಟು ಹೆಚ್ಚು ಕೋವಿಡ್‌ ಸಾವು, ಅಲ್ಲಗಳೆದ ಭಾರತ

masthmagaa.com:

ಕೊರೊನಾ ಸಮಯದಲ್ಲಿ ಭಾರತದಲ್ಲಿ ವರದಿಯಾದ ಸಾವಿನ ಸಂಖ್ಯೆಗಿಂತ ಸುಮಾರು 10 ಪಟ್ಟು ಜಾಸ್ತಿ ಜನ ಮೃತಪಟ್ಟಿದ್ರು ಅಂತ ವಿಶ್ವ ಆರೋಗ್ಯ ಸಂಸ್ಥೆ WHO ಅಚ್ಚರಿಯ ಮಾಹಿತಿಯೊಂದನ್ನ ನೀಡಿದೆ. ಈ ಬಗ್ಗೆ ನೆನ್ನೆ ವರದಿ ಪ್ರಕಟಿಸಿರೋ WHO, ಜನವರಿ 2020 ರಿಂದ ಡಿಸೆಂಬರ್‌ 2021ರವರೆಗೆ ಭಾರತದಲ್ಲಿ ವರದಿಯಾಗಿದ್ದಕಿಂತ 47 ಲಕ್ಷ ಜಾಸ್ತಿ ಜನ ಕೋವಿಡ್‌ನಿಂದ ಮೃತಪಟ್ಟಿದ್ರು ಅಂತ ಹೇಳಿದೆ. ಅಂದ್ರೆ ಭಾರತದ ಅಧಿಕೃತ ಅಂಕಿ-ಅಂಶಕ್ಕಿಂತ 10 ಪಟ್ಟು ಜಾಸ್ತಿ ಮತ್ತು ಜಾಗತಿಕ ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಸಾವುಗಳು ಆಗಿದ್ವು ಅಂತ… ಆದ್ರೆ ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು WHOನ ಡೇಟಾ ತಪ್ಪಾಗಿದೆ ಅಂತ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸತತವಾಗಿ WHOನ ಅಂಕಿ-ಅಂಶ ಕಲೆ ಹಾಕುವ ವಿಧಾನವನ್ನ ಪ್ರಶ್ನೆ ಮಾಡ್ತಾ ಬಂದಿದೆ. WHO ತುಂಬಾ Mathematical ಆಗಿ ಅಂಕಿ-ಅಂಶ ದಾಖಲು ಮಾಡ್ಕೊಳುತ್ತೆ. ಭಾರತದ 17 ರಾಜ್ಯಗಳಲ್ಲಂತೂ ಕೆಲ ವೆಬ್‌ಸೈಟ್‌ಗಳು ಮತ್ತು ಮಾಧ್ಯಮಗಳ ವರದಿಯಿಂದನೇ ಸಂಖ್ಯೆಯನ್ನ ತೆಗೆದುಕೊಂಡಿದೆ. ಇದು statistically ದುರ್ಬಲ ಮತ್ತು ವೈಜ್ಞಾನಿಕವಾಗಿ ಸಂದೇಹಾಸ್ಪದ ವಿಧಾನ. ಭಾರತದಲ್ಲಿ ಜನನ ಮತ್ತು ಮರಣ ದಾಖಲಾತಿಗಾಗಿ ಸಮರ್ಥ ವ್ಯವಸ್ಥೆ ಇದೆ ಅಂತ ಹೇಳಿದೆ. ಇನ್ನು ಭಾರತದ ಕೋವಿಡ್‌ ವರ್ಕಿಂಗ್‌ ಗ್ರೂಪ್‌ನ ಮುಖ್ಯಸ್ಥ ಡಾ. ಎನ್‌.ಕೆ ಅರೋರಾ ಕೂಡ, WHOನ ಡಾಟಾ ಅಸಂಬದ್ಧವಾಗಿದೆ. ನಮ್ಮ ಅಂಕಿ-ಅಂಶಗಳಲ್ಲಿ 15-20% ವ್ಯತ್ಯಾಸ ಇರಬಹುದು ಆದ್ರೆ ಹತ್ತುಪಟ್ಟು ಜಾಸ್ತಿ ಅನ್ನೋದೆಲ್ಲ ಒಪ್ಪಕಾಗಲ್ಲ. ವರ್ಷದಿಂದ ವರ್ಷಕ್ಕೆ ನಮ್ಮ CSR ಅಂದ್ರೆ ಸಿವಿಲ್‌ ರೆಜಿಸ್ಟ್ರೇಷನ್‌ ಸಿಸ್ಟಂ ಕರಾರುವಕ್ಕಾಗಿ ಮರಣದ ಸಂಖ್ಯೆಯನ್ನ ದಾಖಲು ಮಾಡ್ಕೊಳ್ತಾ ಇದೆ. ನಾವು ಈಗಾಗ್ಲೇ ಅದ್ರಲ್ಲಿ 98-99% ನಿಖರತೆಯನ್ನ ತಲುಪಿದ್ದೀವಿ ಅಂತ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply