ರಾಹುಲ್‌ ಗಾಂಧಿ ಮದುವೆ ಯಾವಾಗ? ಸೋನಿಯ ಗಾಂಧಿ ಹೇಳಿದ್ದೇನು?

masthmagaa.com:

ಹರಿಯಾಣದ ಸೋನಿಪತ್‌ನ ರೈತ ಮಹಿಳೆಯರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋನಿಯಾ ಗಾಂಧಿ ಅವ್ರ ಮನೆಗೆ ಆಹ್ವಾನಿಸಿ ಭೋಜನ ಏರ್ಪಡಿಸಿದ್ದಾರೆ. ಈ ವೇಳೆ ರೈತ ಮಹಿಳೆಯೊಬ್ರು ರಾಹುಲ್‌ ಗಾಂಧಿಗೆ ಮದುವೆ ಮಾಡಿಸಿ ಅಂತ ಕೇಳಿದ್ದು, ಆಗ ನೀವೆ ಹುಡುಗಿ ಹುಡುಕಿಕೊಡಿ ಅಂತ ಸೋನಿಯಾ ಗಾಂಧಿ ತಮಾಷೆ ಮಾಡಿದ್ದಾರೆ. ಈ ವಿಡಿಯೋವನ್ನ ರಾಹುಲ್‌ ಟ್ವೀಟ್‌ ಮಾಡಿ ಹಂಚಿಕೊಂಡಿದ್ದು, ಈ ಮಹಿಳೆಯರ ದಿಲ್ಲಿ ದರ್ಶನ ಮತ್ತು ಮನೆಯಲ್ಲಿನ ಊಟ ಸಾಕಷ್ಟು ಮಜವಾಗಿತ್ತು. ಇದು ಅಮ್ಮ, ಪ್ರಿಯಾಂಕಾ ಮತ್ತು ನನಗೆ ಸದಾ ನೆನಪಿನಲ್ಲಿಡಬೇಕಾದ ದಿನ ಎಂದಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಸೋನಿಪತ್‌ನ ಮದೀನಾ ಗ್ರಾಮದ ಮೂಲಕ ತೆರಳುವಾಗ ರಾಹುಲ್ ವಾಹನ ನಿಲ್ಲಿಸಿ, ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ಭೇಟಿಯಾಗಿದ್ದರು. ಅವರ ಜತೆ ಭತ್ತದ ಸಸಿ ನಾಟಿ ಮಾಡಿ, ಟ್ರ್ಯಾಕ್ಟರ್ ಚಲಾಯಿಸಿ, ಅವರ ಜೊತೆಯಲ್ಲಿ ಆಹಾರ ಸೇವಿಸಿದ್ದರು. ಆಗ ಅವರನ್ನು ದಿಲ್ಲಿಗೆ ಕರೆಸಿಕೊಂಡು ‘ದಿಲ್ಲಿ ದರ್ಶನ’ ಮಾಡಿಸುವುದಾಗಿ ಭರವಸೆ ನೀಡಿದ್ದರು.

-masthmagaa.com

Contact Us for Advertisement

Leave a Reply